    ಮೂಲದೊಡನೆ ಪರಿಶೀಲಿಸಿ

ಇಂಗಾಲ ಸಂಯುಕ್ತ ರಸಾಯನಶಾಸ್ತ್ರ  

ಇಂಗಾಲ ಮತ್ತು ಇಂಗಾಲ ಸಂಯುಕ್ತಗಳ ಅಭ್ಯಾಸ ಮಾಡುವ ರಸಾಯನಶಾಸ್ತ್ರ ವಿಭಾಗ (ಕಾರ್ಬನ್ ಕಾಂಪೌಂಡ್ ಕೆಮಿಸ್ಟ್ರಿ). ಜೀವಜನ್ಯ, ಎಂದರೆ ಸಸ್ಯ ಮತ್ತು ಪ್ರಾಣಿಜನ್ಯ ಸಂಯುಕ್ತಗಳ ಅಭ್ಯಾಸ ಮಾಡುವ ರಸಾಯನಶಾಸ್ತ್ರ ವಿಭಾಗವನ್ನು ಮೊದಲು ಸಾವಯವ (ಆಗ್ರ್ಯಾನಿಕ್) ರಸಾಯನಶಾಸ್ತ್ರವೆಂದು ಕರೆಯುತ್ತಿದ್ದರು. ಅಂದಿನ ವಿಜ್ಞಾನಿಗಳು ಜೀವದ ನೆರವಿಲ್ಲದೆ ಈ ಬಗೆಯ ಸಂಯುಕ್ತಗಳ ತಯಾರಿಕೆ ಸಾಧ್ಯವೇ ಇಲ್ಲವೆಂದು ನಂಬಿದ್ದುದರಿಂದ ಈ ಹೆಸರು ಬಂತು. ಇಂಗಾಲ ಸಂಯುಕ್ತಗಳನ್ನು ಅವುಗಳ ಆಕರಗಳಿಂದ ಬೇರ್ಪಡಿಸಿ ಪರೀಕ್ಷಿಸುವುದು. ಇಂಗಾಲ ಸಂಯುಕ್ತಗಳ ಪರಿವರ್ತನೆಗಳ ಅಭ್ಯಾಸ ಇವು ಬಲು ಹಿಂದಿನಿಂದಲೂ ಪ್ರಚಲಿತವಿದ್ದುವು. ಉದಾಹರಣೆಗೆ ಕೆಲವೊಂದು ಮದ್ಯಸಾರಗಳ ತಯಾರಿಕೆಯನ್ನು ಸಾಧಾರಣವಾಗಿ 9ನೆಯ ಶತಮಾನದವರೆಗೂ ಗುರುತಿಸಲಾಗಿದೆ.
 
ಪ್ರಕೃತಿಯಲ್ಲಿ ದೊರೆಯುವ ಇಂಗಾಲ ಸಂಯುಕ್ತಗಳ ಕ್ರಮಬದ್ಧ ತಯಾರಿಕೆ ಮತ್ತು ಅಧ್ಯಯನಗಳು ಆರಂಭವಾದದ್ದು 18ನೆಯ ಶತಮಾನದಲ್ಲಿ. ಶೀಲೆ ಎಂಬ ವಿಜ್ಞಾನಿ ಟಾರ್ಟಾನಿಕ್, ಆಕ್ಸಾಲಿಕ್, ಸಿಟ್ರಿಕ್, ಮ್ಯಾಲಿಕ್, ಮ್ಯೂಸಿಕ್ ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಬೇರ್ಪಡಿಸಿ ಅವುಗಳ ಗುಣ ಲಕ್ಷಣಗಳನ್ನು ಪರೀಕ್ಷಿಸಿದ (1769-1785); ಪ್ರಾಣಿಮೂತ್ರದಲ್ಲಿರುವ ಯೂರಿಯವನ್ನು ಬೇರ್ಪಡಿಸಿದ (1773). ಈ ಬಗೆಯ ಹಲವಾರು ಸಂಯುಕ್ತಗಳು ದೊರೆತ ಅನಂತರ ಇವುಗಳ ಗುಣ ಲಕ್ಷಣಗಳು ಖನಿಜಜನ್ಯ ಸಂಯುಕ್ತಗಳ ಗುಣ ಲಕ್ಷಣಗಳಿಗಿಂತ ಭಿನ್ನವಾದುವುಗಳೆಂದು ಕಂಡುಕೊಂಡ ವಿಜ್ಞಾನಿಗಳು ಈ ಸಂಯುಕ್ತಗಳ ರಸಾಯನಶಾಸ್ತ್ರವನ್ನು ಪ್ರತ್ಯೇಕವಾಗಿ ಅಭ್ಯಸಿಸತೊಡಗಿದರು. 19ನೆಯ ಶತಮಾನದ ಆದಿಭಾಗದಲ್ಲಿ ಬಜಿóರ್óೀಲಿಯಸ್ ಈ ವಿಭಾಗವನ್ನು ಸಾವಯವ ರಸಾಯನಶಾಸ್ತ್ರವೆಂದು ಕರೆದ. ಮುಖ್ಯವಾಗಿ ಕೇವಲ ನಾಲ್ಕು ಧಾತುಗಳಿಂದ-ಎಂದರೆ ಇಂಗಾಲ (ಕಾರ್ಬನ್), ಜಲಜನಕ (ಹೈಡ್ರೊಜನ್), ಆಮ್ಲಜನಕ (ಆಕ್ಸಿಜನ್) ಮತ್ತು ಸಾರಜನಕಗಳಿಂದ (ನೈಟ್ರೊಜನ್) ಬಲುಮಟ್ಟಿನ ಸಾವಯವ ಸಂಯುಕ್ತಗಳು ತಯಾರಾಗಿವೆಯೆಂದು ಲವಾಸ್ಯೆ ಈ ಸಂಯುಕ್ತಗಳ ವಿಶ್ಲೇಷಣದಿಂದ ತೋರಿಸಿದ, ಅದುವರೆಗೆ ನಿರವಯವ ಲವಣಗಳನ್ನು (ಇನಾಗ್ರ್ಯಾನಿಕ್ ಸಾಲ್ಟ್ಸ್) ತಯಾರಿಸಲು ಉಪಯೋಗಿಸುತ್ತಿದ್ದ ಯಾವ ಕ್ರಿಯೆ, ವಿಧಾನಗಳಿಂದಲೂ ಈ ಸಂಯುಕ್ತಗಳನ್ನು ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಜೈವಿಕ ಸಸ್ಯ ಮತ್ತು ಪ್ರಾಣಿಗಳಲ್ಲಿರುವ ಜೀವಶಕ್ತಿಯ ನೆರವಿಲ್ಲದೆ ಇಂಥವನ್ನು ತಯಾರಿಸುವುದು ಅಸಾಧ್ಯವೆಂದು ಭಾವಿಸಲಾಯಿತು. 

ಸಜೀವಿಗಳಲ್ಲಿನ ಅಥವಾ ಕೋಶಗಳಲ್ಲಿನ (ಸೆಲ್) ಜೀವಶಕ್ತಿಯ ನೆರವು ತೆಗೆದುಕೊಳ್ಳದೆ ಪ್ರಯೋಗಶಾಲೆಯಲ್ಲಿ ಅದುವರೆಗೆ ಪರಿಚಿತವಾಗಿದ್ದ ರಾಸಾಯನಿಕ ಕ್ರಿಯೆಗಳನ್ನು ಉಪಯೋಗಿಸಿ ವೋಹ್ಲರ್ ಸಯನೋಜೆನ್ನಿನಿಂದ (ಅ2ಓ2) ಆಕ್ಸಾಲಿಕ್ ಆಮ್ಲವನ್ನೂ (ಅಔಔಊ)2 (1824) ಮುಂದೆ 1828ರಲ್ಲಿ ಅಮೋನಿಯಂ ಸಯನೇಟ್‍ನಿಂದ [(ಓಊ4)2ಅಓಔ] ಯೂರಿಯವನ್ನೂ ಸಂಶ್ಲೇಷಿಸಿದ. ವೋಹ್ಲರನ ಈ ಸಂಶ್ಲೇಷಣಗಳು ಸಾವಯವ ಸಂಯುಕ್ತಗಳ ಸಂಶ್ಲೇಷಣೆಗೆ ಜೀವಶಕ್ತಿಯ ನೆರವು ಅಗತ್ಯವಿಲ್ಲವೆಂದೂ ಇತರ ನಿರವಯವ ಸಂಯುಕ್ತಗಳಂತೆ ಅವನ್ನೂ ಪ್ರಯೋಗ ಶಾಲೆಯಲ್ಲಿ ತಯಾರಿಸಬಹುದೆಂದೂ ತೋರಿಸಿದುವು. ವೋಹ್ಲರನ ಹಾದಿಹಿಡಿದ ವಿಜ್ಞಾನಿಗಳು ಅವನ ಅನಂತರ ಅನೇಕ ಸಾವಯವ ಸಂಯುಕ್ತಗಳನ್ನು ಪ್ರಯೋಗ ಶಾಲೆಯಲ್ಲಿ ಸಂಶ್ಲೇಷಿಸಿದುದರ ಪರಿಣಾಮವಾಗಿ ಜೀವಶಕ್ತಿವಾದ ಕ್ರಮೇಣ ಕಣ್ಮರೆಯಾಯಿತು. 

1848ರ ವೇಳೆಗೆ ಅನೇಕ ಸಾವಯವ ಸಂಯುಕ್ತಗಳ ವಿಶ್ಲೇಷಣೆ, ಸಂಶ್ಲೇಷಣೆಗಳು ನಡೆದಿದ್ದು ಇಂಗಾಲ ಎಲ್ಲ ಸಾವಯವ ಸಂಯುಕ್ತಗಳಲ್ಲಿನ ಆವಶ್ಯಕ ಧಾತುವೆಂದು ತಿಳಿದುಬಂತು. ಅಂದಿನಿಂದ ಈ ವಿಭಾಗಕ್ಕೆ ಇಂಗಾಲ ಸಂಯುಕ್ತರಸಾಯನಶಾಸ್ತ್ರವೆಂಬ ಹೆಸರು ಆರಂಭವಾಯಿತು. ಇಂದು ಈ ವಿಭಾಗದಲ್ಲಿ ಜೀವಜನ್ಯ ಸಂಯುಕ್ತಗಳು ಮಾತ್ರವಲ್ಲದೆ ಅನೇಕ ಕೃತಕವಾಗಿ ತಯಾರಿಸಿದ ಇಂಗಾಲ ಸಂಯುಕ್ತಗಳ ಸಂಶ್ಲೇಷಣೆ, ಅಧ್ಯಯನಗಳು ಸೇರಿರುವುದರಿಂದ ಸಾವಯವ ರಸಾಯನಶಾಸ್ತ್ರ ಎಂಬ ಶೀರ್ಷಿಕೆಗಿಂತಲೂ ಇಂಗಾಲಸಂಯುಕ್ತರಸಾಯನಶಾಸ್ತ್ರ ಎಂಬ ಶೀರ್ಷಿಕೆಯೇ ಸೂಕ್ತವಾಗಿದೆ. ಆದರೆ ಮೊದಲೇ ತಿಳಿಸಿದಂತೆ ಈ ವಿಭಾಗದಲ್ಲಿ ಇಂಗಾಲಸಂಯುಕ್ತಗಳೆಲ್ಲವೂ ಸೇರುವುದಿಲ್ಲ. ಸರಳ ಮತ್ತು ಖನಿಜ ಸಂಬಂಧವಾದ ಸಂಯುಕ್ತಗಳಾದ ಇಂಗಾಲದ ಆಕ್ಸೈಡುಗಳು ಕಾರ್ಬಾನಿಕ್ ಆಮ್ಲ ಮತ್ತು ಅದರ ಲವಣಗಳು, ಹೈಡ್ರೊಸಯನಿಕ್ ಆಮ್ಲ ಮತ್ತು ಅದರ ಲವಣಗಳು, ಸಯನೇಟುಗಳೇ ಮೊದಲಾದುವುಗಳು ನಿರವಯವ (ಇನಾಗ್ರ್ಯಾನಿಕ್) ರಸಾಯನ ಶಾಸ್ತ್ರದ ಗುಂಪಿಗೆ ಸೇರುತ್ತವೆ. ಇಂಗಾಲ ಸಂಯುಕ್ತ ರಸಾಯನಶಾಸ್ತ್ರ ವಿಭಾಗದಲ್ಲಿ ಸೇರಿರುವ ಸಂಯುಕ್ತಗಳಲ್ಲಿ ಸಾಮಾನ್ಯವಾಗಿ ಎಲ್ಲದರಲ್ಲಿಯೂ ಇಂಗಾಲದೊಡನೆ ಜಲಜನಕವೂ ಇದ್ದೇ ಇರುತ್ತದೆ. 

ಇಂಗಾಲದ ಸಂಯುಕ್ತಗಳು ಅಸಂಖ್ಯಾತ ಸಂಖ್ಯೆಯಲ್ಲಿರಲು ಕಾರಣವನ್ನು ವಿವೇಚಿಸುವಾಗ ಅದರ ಸಂಯೋಗದ ಬಗೆ ಇತರ ಧಾತುಗಳ ಸಂಯೋಗದ ಬಗೆಗಿಂತಲೂ ಭಿನ್ನವಾದುದೆಂದು ತಿಳಿದುಬರುತ್ತದೆ. ನಾಲ್ಕು ವೇಲೆನ್ಸಿ ಎಲೆಕ್ಟ್ರಾನುಗಳನ್ನು ಪಡೆದಿರುವ ಇಂಗಾಲ ಸ್ಥಿರ ಅಯಾನ್ (ಸ್ಟೇಬಲ್ ಅಯಾನ್) ಆಗಲು ನಾಲ್ಕು ವಿದ್ಯುತ್ಕಣಗಳನ್ನು ಕಳೆದುಕೊಳ್ಳಬೇಕು, ಇಲ್ಲವೇ ನಾಲ್ಕನ್ನು ಗಳಿಸಬೇಕು. ಅಯಾನ್ ಸೃಷ್ಟಿಯಾಗಲು ಅಧಿಕಶಕ್ತಿಬೇಕು. ಆದ್ದರಿಂದಲೇ ಇಂಗಾಲಸಂಯುಕ್ತಗಳಲ್ಲಿ ಇಂಗಾಲ ಅಯಾನ್ ರೂಪದಲ್ಲಿರುವುದಿಲ್ಲ; ಮತ್ತು ಇಂಗಾಲಸಂಯುಕ್ತಗಳಲ್ಲಿ ಬಂಧಗೊಂಡಿರುವ ಪರಮಾಣುಗಳ ನಡುವೆ ವಿದ್ಯುದಂಶದ ಬೇರ್ಪಡೆಯೂ (ಚಾರ್ಜ್ ಸೆಪರೇಷನ್) ಅಧಿಕವಾಗಿರುವುದಿಲ್ಲ. ಬಂಧವೊಂದರ ನಿರ್ಮಾಣಕ್ಕಾಗಿ ಅವಶ್ಯಕವಾಗಿರುವ ವಿದ್ಯುತ್ಕಣಗಳ ವಿದ್ಯುದಂಶಗಳು ಬಂಧಗೊಂಡಿರುವ ಎರಡು ಪರಮಾಣುಗಳ ನಡುವೆ ಹೆಚ್ಚುಕಡಿಮೆ ಸರಿಸಮವಾಗಿ ಹಂಚಿ ಹೋಗಿರುತ್ತವೆ. ಇಂಥ ಬಂಧನಗಳಲ್ಲಿ ಅಸಮಾಂಗತ್ವ (ಅಸಿಮೆಟ್ರಿ) ಅತ್ಯಲ್ಪವಾದುದರಿಂದ ಇವುಗಳ ಬಂಧ ಅಧಿಕ. ಈ ಕಾರಣದಿಂದಲೇ ಇಂಗಾಲಸಂಯುಕ್ತಗಳ ಸ್ಥಿರತೆಯೂ ಹೆಚ್ಚು. ಈ ತರಹದ ಸರಿಸಮ ವಿದ್ಯುದಂಶ ಅಥವಾ ವಿದ್ಯುತ್ಕಣಗಳ ಹಂಚಿಕೆಯಿಂದ ಪರಮಾಣುಗಳ ನಡುವೆ ಏರ್ಪಡುವ ಬಂಧದ ಹೆಸರು ಸಹ ಸಂಯೋಗಬಂಧ (ಕೋವೇಲೆಂಟ್ ಬಾಂಡ್). ಇಂಥ ಬಂಧಶಕ್ತಿಯನ್ನು ಪಡೆದಿರುವುದರಿಂದಲೇ ಇಂಗಾಲದ ಪರಮಾಣುಗಳ ನಡುವೆ ಪರಸ್ಪರ ಸ್ಥಿರಬಂಧ ಸಾಧ್ಯ. ಈ ಬಗೆಯ ಅಧಿಕಬಂಧಶಕ್ತಿಯುಳ್ಳ ಇಂಗಾಲ ಪರಮಾಣುಗಳ ಸ್ಥಿರವಾದ ಸರಣಿ (ಚೈನ್) ವೃತ್ತ (ರಿಂಗ್) ಮತ್ತು ವಿವಿಧಾಕಾರದ ಜಾಲ (ನೆಟ್‍ವರ್ಕ್) ರಚನೆಗಳು ಸಾಧ್ಯ. ಇಂಗಾಲದ ಪರಮಾಣುಗಳು ಇತರ ಇಂಗಾಲದ ಪರಮಾಣುಗಳೊಡನೆ ಮಾತ್ರವಲ್ಲದೆ ಇತರ ಧಾತುಗಳ ಪರಮಾಣುಗಳೊಡನೆಯೂ ಸ್ಥಿರರೀತಿಯಲ್ಲಿ ಬಂಧಗೊಳ್ಳಬಲ್ಲುವು. ಇಂಗಾಲ-ಇಂಗಾಲ ಬಂಧವಲ್ಲದೆ ಇಂಗಾಲಸಂಯುಕ್ತಗಳಲ್ಲಿನ ಮತ್ತೊಂದು ಮುಖ್ಯ ಬಂಧವಾದ ಇಂಗಾಲ-ಜಲಜನಕ ಬಂಧದಲ್ಲಿಯೂ ವಿದ್ಯುದಂಶ ತಕ್ಕಮಟ್ಟಿಗೆ ಸರಿಸಮನಾಗಿಯೇ ಹಂಚಿಕೆಯಾಗಿರುವುದರಿಂದ ಆ ಬಗೆಯ ಬಂಧವೂ ಬಹು ಸ್ಥಿರವಾದುದು. ಈ ಬಗೆಯಾಗಿ ವಿದ್ಯುದಂಶ ಅಥವಾ ವಿದ್ಯುತ್ಕಣಗಳ ಹಂಚಿಕೆಯಿಂದ ಏರ್ಪಡುವ ಬಂಧಗಳನ್ನು ಸಂಯುಕ್ತಗಳಲ್ಲಿ ಈ ಕೆಳಗೆ ತೋರಿಸಿರುವಂತೆ ನಿದರ್ಶಿಸಬಹುದು. 

ಚಿತ್ರ-1

ಇಂಗಾಲಸಂಯುಕ್ತಗಳಲ್ಲಿ ಪರಮಾಣುಗಳ ನಡುವಣ ಸಾಮಾನ್ಯ ಮತ್ತು ಸರಳ ಬಂಧ ಏಕಬಂಧ. ಈ ಬಗೆಯ ಬಂಧದಲ್ಲಿ ಎರಡು ಪರಮಾಣುಗಳ ನಡುವೆ ಎರಡು ವಿದ್ಯುತ್ಕಣಗಳು ಸರಿಸಮನಾಗಿ ಹಂಚಿಕೆಯಾಗಿರುತ್ತವೆ. ಇಂಗಾಲ ಮತ್ತು ಇನ್ನೊಂದು ಇಂಗಾಲ ಅಥವಾ ಇತರ ಪರಮಾಣುಗಳ ನಡುವೆ ಸಂಯೋಗಶಕ್ತಿಯ ನಿಯಮಗಳಿಗೆ ಅನುಗುಣವಾಗಿ ದ್ವಿಬಂಧ, ತ್ರಿಬಂಧಗಳೂ ಸಾಧ್ಯ. ದ್ವಿಬಂಧದಿಂದ ಕೂಡಿರುವ ಎರಡು ಪರಮಾಣುಗಳ ನಡುವೆ ನಾಲ್ಕು ವಿದ್ಯುತ್ಕಣಗಳೂ ತ್ರಿಬಂಧದಿಂದ ಕೂಡಿರುವ ಎರಡು ಪರಮಾಣುಗಳ ಮಧ್ಯೆ ಆರು ವಿದ್ಯುತ್ಕಣಗಳೂ ಹಂಚಿಕೆಯಾಗಿರುತ್ತವೆ. ಮೇಲೆ ತೋರಿಸಿರುವ ಮೀಥೇನ್ ಮತ್ತು ಈಥೇನ್ ಅಣುಗಳಲ್ಲಿರುವ ಎಲ್ಲ ಬಂಧಗಳೂ ಎರಡು ವಿದ್ಯುತ್ಕಣಗಳಿಂದಾದ ಏಕಬಂಧಗಳು. ಎಥಿಲೀನ್ ಮತ್ತು ಫಾರ್ಮಾಲ್ಡಿಹೈಡುಗಳು ದ್ವಿಬಂಧವನ್ನುಳ್ಳ ಸಂಯುಕ್ತಗಳು. ಅಸಿಟಲೀನ್ ಮತ್ತು ಅಸಿಟೋನೈಟ್ರಿಲ್ಲುಗಳು ತ್ರಿಬಂಧವುಳ್ಳ ಸಂಯುಕ್ತಗಳು, ರಚನೆಗಳನ್ನು ತೋರಿಸುವಾಗ ಚುಕ್ಕೆಗಳಾಗಿ ವಿದ್ಯುತ್ಕಣಗಳನ್ನಾಗಲೀ ಬಂಧಗಳನ್ನು ಸೂಚಿಸುವ ಗೆರೆಗಳನ್ನಾಗಲೀ ಉಪಯೋಗಿಸಬಹುದು. ಏಕಬಂಧನವನ್ನು ನಿರ್ದೇಶಿಸಲು ಒಂದು ಗೆರೆಯನ್ನೂ ದ್ವಿಬಂಧಕ್ಕೆ ಎರಡು ಗೆರೆಗಳನ್ನೂ ತ್ರಿಬಂಧಕ್ಕೆ ಮೂರು ಗೆರೆಗಳನ್ನೂ ಉಪಯೋಗಿಸಲಾಗುತ್ತದೆ. 

ಚಿತ್ರ-2

ಸಂಯುಕ್ತಗಳಲ್ಲಿ ಏಕಬಂಧ, ದ್ವಿಬಂಧ, ತ್ರಿಬಂಧಗಳು ಯಾವುದೇ ಇರಲಿ ಪ್ರತಿ ಪರಮಾಣುವೂ ತನ್ನ ವೇಲೆನ್ಸಿ ನಿಯಮಗಳನ್ನು ಅನುಸರಿಸಲೇಬೇಕು-ಎಂದರೆ ಇಂಗಾಲದ ಪರಮಾಣುವಿನ ಬಂಧಗಳು ನಾಲ್ಕು. ಆಮ್ಲಜನಕದ ಪರಮಾಣುವಿನ ಬಂಧಗಳು ಎರಡು, ಸಾರಜನಕದ ಪರಮಾಣುವಿನ ಬಂಧಗಳು ಮೂರು-ಇವೇ ಮೊದಲಾದ ನಿಯಮಗಳ ಉಲ್ಲಂಘನೆ ಆಗುವಂತಿಲ್ಲ. 
ಸಮಘಟಕತ್ವ (ಐಸೋಮೆರಿಸಂ) : ಇತರ ಧಾತುಗಳ ಸಂಯುಕ್ತಗಳನ್ನು ನಿರ್ದೇಶಿಸುವಾಗ ಸಾಮಾನ್ಯವಾಗಿ ರಚನಾಸೂತ್ರಗಳನ್ನು ಬರೆಯುವುದಿಲ್ಲ; ಕೇವಲ ಅಣುಸೂತ್ರಗಳೇ ಸಾಕು. ಆದರೆ ಇಂಗಾಲ ಸಂಯುಕ್ತಗಳನ್ನು (ಕೆಲವು ಅತಿ ಸರಳವಾದುವುಗಳನ್ನು ಬಿಟ್ಟರೆ) ನಿರ್ದೇಶಿಸಲು ಅಣುಸೂತ್ರಗಳು ಸಾಲವು. ಅಣುಸೂತ್ರ ಒಂದೇ ಆಗಿದ್ದರೂ ರಚನೆಯಲ್ಲಿ ಭಿನ್ನವಾಗಿರುವ ಇಂಗಾಲ ಸಂಯುಕ್ತಗಳು ಅನೇಕವಿವೆ. ಇಂಥ ಸಂಯುಕ್ತಗಳನ್ನು ಪರಸ್ಪರ ಸಮಘಟಕಗಳೆಂದೂ (ಐಸೋಮೆರ್ಸ್) ಈ ವಿಶಿಷ್ಟ ಲಕ್ಷಣವನ್ನು ಸಮಘಟಕತ್ವವೆಂದೂ (ಐಸೋಮೆರಿಸಂ) ಕರೆಯಲಾಗುತ್ತದೆ.

ಹೈಡ್ರೊಕಾರ್ಬನ್ (ಜಲಜನಕೇಂಗಾಲ) ಸಂಯುಕ್ತಗಳಲ್ಲಿ ಬ್ಯೊಟೇನ್ ಮತ್ತು ಅದಕ್ಕಿಂತ ಹಿರಿಯಗಾತ್ರದ ಅಣುಗಳಲ್ಲಿ ಸಮಘಟಕತ್ವವನ್ನು ಕಾಣಬಹುದು.
						
ಮೇಲೆ ಬರೆದಿರುವ ಎರಡು ಅಣುಗಳ ಅಣುಸೂತ್ರ ಒಂದೇ ಆದರೂ ಅವು ಒಂದೇ ಬಗೆಯವಲ್ಲ. ಎರಡರಲ್ಲೂ ನಾಲ್ಕು ಇಂಗಾಲಗಳಿದ್ದರೂ ಮೊದಲನೆಯದರಲ್ಲಿ ನಾಲ್ಕು ಇಂಗಾಲದ ಪರಮಾಣುಗಳೂ ಒಂದು ನೇರ ಸರಣಿಯಲ್ಲಿವೆ. ಇದು ನಾರ್ಮಲ್ ಬ್ಯೂಟೇನ್. ಎರಡನೆಯದರಲ್ಲಿ ಮೂರು ಮಾತ್ರ ಒಂದು ನೇರ ಸರಣಿಯಲ್ಲಿದ್ದು ನಾಲ್ಕನೆಯದು ಎರಡನೆಯ ಇಂಗಾಲದ ಪರಮಾಣುವಿನಿಂದ ಕವಲಾಗಿ ಸೇರಿಕೊಂಡಿದೆ. ಇದು ಐಸೋಬ್ಯೂಟೇನ್. ನಾರ್ಮಲ್ ಮತ್ತು ಐಸೋಬ್ಯೂಟೇನುಗಳೆರಡರ ಅಣುಸೂತ್ರವೂ ಅ4ಊ10. ಆದರೂ ಅವುಗಳ ರಚನೆಗಳು ಭಿನ್ನವಾಗಿರುವುದರಿಂದ, ಭೌತಲಕ್ಷಣಗಳಲ್ಲಿ ಮತ್ತು ರಾಸಾಯನಿಕ ಪಟುತ್ವಗಳಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತದೆ. ಆದ್ದರಿಂದ ಅವು ಭಿನ್ನ ಸಂಯುಕ್ತಗಳೇ ಹೊರತು ಒಂದೇ ಸಂಯುಕ್ತದ ಭಿನ್ನರೂಪಗಳಲ್ಲ. ಪುಂಜವೊಂದರ (ಮೇಲ್ಕಂಡ ಬ್ಯೂಟೇನುಗಳಲ್ಲಿ ಮೀಥೈಲ್ ಪುಂಜದ) ಸ್ಥಾನಪಲ್ಲಟನ ಈ ಬಗೆಯ ಸಮಘಟಕಗಳಲ್ಲಿರುವ ಪರಸ್ಪರ ವ್ಯತ್ಯಾಸ-ಆದ್ದರಿಂದ ಇವುಗಳ ಹೆಸರು ಸ್ಥಾನೀಯ (ಪೊಸಿóóಷನಲ್) ಸಮಘಟಕಗಳು. ಸ್ಥಾನೀಯ ಸಮಘಟಕತ್ವವೆಂದು ಈ ಸಮಘಟಕತ್ವದ ಹೆಸರು. 

ಇನ್ನೊಂದು ರೀತಿಯ ಸಾಮಾನ್ಯ ಸಮಘಟಕತ್ವ ಕ್ರಿಯಾತ್ಮಕ ಸಮಘಟಕತ್ವ. ಎರಡು ಕ್ರಿಯಾತ್ಮಕ ಸಮಘಟಕತ್ವಗಳ ಅಣುಸೂತ್ರ ಒಂದೇ ಆಗಿದ್ದು ರಚನಾಸೂತ್ರದಲ್ಲಿ ಭಿನ್ನತೆಯಿರುವುದು ಮಾತ್ರವಲ್ಲದೆ ಇವುಗಳ ಗುಣಲಕ್ಷಣಗಳನ್ನು ನಿರ್ಣಯಿಸುವ ಕ್ರಿಯಾಪುಂಜಗಳಲ್ಲಿಯೇ (ಫಂಕ್ಷನಲ್ ಗ್ರೂಪ್) ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಅ2ಊ6ಔ ಎಂಬ ಅಣುಸೂತ್ರವಿರುವ ಎರಡು ಸಂಯುಕ್ತಗಳಿವೆ. ಇವುಗಳಲ್ಲಿ ಮೊದಲನೆಯದು ಔಊ ಅಥವಾ ಹೈಡ್ರಾಕ್ಸಿಲ್ ಕ್ರಿಯಾಪುಂಜವನ್ನುಳ್ಳ ಈಥೈಲ್ ಆಲ್ಕೊಹಾಲ್. ಎರಡನೆಯದು ಡೈಮೀಥೈಲ್ ಈಥರ್. ಇವೆರಡಕ್ಕೂ ಭೌತ ಮತ್ತು ರಾಸಾಯನಿಕ ಗುಣಲಕ್ಷಣಗಳಲ್ಲಿ ಬಹಳ ವ್ಯತ್ಯಾಸವಿದೆ. ಎರಡೂ ಬೇರೆ ಬೇರೆ ರಾಸಾಯನಿಕ ವರ್ಗಗಳಿಗೆ ಸೇರಿದ ಸಂಯುಕ್ತಗಳು. 

ಇಂಗಾಲ ಪರಮಾಣುವಿನ ರಚನೆ ಮತ್ತು ಇಂಗಾಲಸಂಯುಕ್ತಗಳ ಆಕಾರ : ಎಲ್ಲ ಪರಮಾಣುಗಳಿಗೂ ಮಧ್ಯೆ ಪರಮಾಣುಕೇಂದ್ರ ಅಥವಾ ಬೀಜ (ನ್ಯೂಕ್ಲಿಯಸ್) ಇದೆ. ಬೀಜದ ಸುತ್ತಲೂ ಋಣ ವಿದ್ಯುತ್ಕಣಗಳು ಮುಖ್ಯ ಶಕಲಕಕ್ಷೆಗಳ (ಮೇನ್ ಕ್ವಾಂಟೈಜ್ಡ್ ಆರ್ಬಿಟ್ಸ್) ಮಿತಿಯಲ್ಲಿ ನಿರ್ದಿಷ್ಟ ಕಕ್ಷೆಗಳಲ್ಲಿ ಬಲು ವೇಗವಾಗಿ ಸಂಚರಿಸುತ್ತಿರುತ್ತವೆ. ಬೀಜದ ಸುತ್ತಲಿನ ಪ್ರದೇಶದಲ್ಲಿ ಯಾವ ಎಡೆಯಲ್ಲಿ ಬೇಕಾದರೂ ವಿದ್ಯುತ್ಕಣವೊಂದು ಇರಬಹುದಾದ ಸಂಭಾವ್ಯತೆಯನ್ನು (ಪ್ರಾಬೆಬಿಲಿಟಿ) ಷ್ರೋಡಿಂಗರ್ ಸಮೀಕರಣವನ್ನು ಉಪಯೋಗಿಸಿ ತಿಳಿಯಬಹುದು. ಆವರಣವೊಂದರಲ್ಲಿ ಹೀಗೆ ಕಂಡುಹಿಡಿದ ಸಂಭಾವ್ಯತೆಯನ್ನು ಪರೀಕ್ಷಿಸಿದಾಗ ಯಾವೊಂದು ಎಡೆ ಅಥವಾ ವರ್ತುಲದಲ್ಲಿಯೂ ಪೂರ್ಣ ಸಂಭಾವ್ಯತೆ (ಎಂದರೆ ಸಂಭಾವ್ಯತೆ 1) ಇಲ್ಲದೆ ಹೋದರೂ ಹಲವೆಡೆಗಳಲ್ಲಿ ಅದು ಹೆಚ್ಚಾಗಿದ್ದು ಅಕ್ಕಪಕ್ಕಗಳಲ್ಲಿ ಕ್ರಮೇಣ ಕಡಿಮೆಯಾಗುವುದು ತಿಳಿದುಬರುತ್ತದೆ. ವಿದ್ಯುತ್ಕಣವನ್ನು ಋಣ ವಿದ್ಯುತ್ತಿನ ಚದರಿ ಹರಡಿದ ಮೋಡದಂತೆ (ಡಿಫ್ಯೂಸ್ಡ್ ಕ್ಲೌಡ್ ಆಫ್ ಎಲೆಕ್ಟ್ರಿಸಿಟಿ) ಚಿತ್ರಿಸಿದರೆ ಸಂಭಾವ್ಯತೆ ಹೆಚ್ಚಿರುವ ಕಡೆಗಳಲ್ಲಿ ದಟ್ಟವಾಗಿಯೂ ಕಡಿಮೆಯಿರುವ ಕಡೆಗಳಲ್ಲಿ ತೆಳುವಾಗಿಯೂ ಇರುತ್ತದೆ. ಸಂಭಾವ್ಯತೆಯನ್ನು ನಿರ್ದೇಶಿಸುವ ನಕ್ಷೆಯಲ್ಲಿ ದಟ್ಟ ಮೋಡದ ನಕ್ಷೆ ಒಂದು ನಿರ್ದಿಷ್ಟ ಆಕೃತಿಯನ್ನು ತಾಳಿರುವುದು ಕಂಡುಬರುತ್ತದೆ. ಈ ನಿರ್ದಿಷ್ಟ ಆಕೃತಿಗಳು ಆಯಾ ವಿದ್ಯುತ್ಕಣಗಳ ಶಕ್ತಿ ಪ್ರತೀಕಗಳು. ಇವನ್ನು ಪರಮಾಣು ಕಕ್ಷೇಯಗಳೆಂದು (ಅಟಾಮಿಕ್ ಆರ್ಬಿಟಲ್) ಕರೆಯಲಾಗುತ್ತದೆ. ನಿರ್ದಿಷ್ಟ ಆಕೃತಿ ಪಡೆದಿರುವ ಈ ಕಕ್ಷೇಯಗಳನ್ನು ಅವುಗಳ ಆಕೃತಿ, ಶಕ್ತಮಟ್ಟಗಳಿಗೆ ಅನುಗುಣವಾಗಿ ಹೆಸರಿಸಲಾಗಿದೆ. ಇಂಗಾಲದ ಪರಮಾಣುಸ್ವರೂಪ ಮತ್ತು ಇಂಗಾಲಸಂಯುಕ್ತಗಳ ಆಕಾರವನ್ನು ಅರಿಯಲು ಪ್ರಮುಖ ಆವರಣದ (ಮೇನ್ ಶೆಲ್) ಮಿತಿಯಲ್ಲಿನ s ಮತ್ತು ಠಿ ಎಂಬ ಪರಮಾಣು ಕಕ್ಷೇಯಗಳ ಆಕೃತಿಗಳನ್ನು ತಿಳಿದುಕೊಂಡರೆ ಸಾಕು. s ಕಕ್ಷೇಯ ಬೀಜದ ಸುತ್ತಲೂ ಸಮನಾಗಿ ಹರಡಿಕೊಂಡು ಪೊಳ್ಳು ಗೋಳಾಕೃತಿಯನ್ನು ಪಡೆದಿರುತ್ತದೆ.

ಚಿತ್ರ-3

ಮೊದಲ ಮುಖ್ಯ ವಲಯದಲ್ಲಿ ಶಕಲ ನಿಯಮಗಳಿಗೆ ಅನುಗುಣವಾಗಿ ಎರಡು ವಿದ್ಯುತ್ಕಣಗಳು ಮಾತ್ರವಿದ್ದು 1s ಪರಮಾಣು ಕಕ್ಷೇಯದಲ್ಲಿರುತ್ತವೆ. ಇವು ಇಂಗಾಲದ ರಾಸಾಯನಿಕ ಸಂಯೋಗ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಮುಂದಿನ ಎರಡು ವಿದ್ಯುತ್ಕಣಗಳು ಗೋಳಾಕೃತಿಯ 2s ಕಕ್ಷೇಯದಲ್ಲಿವೆ. 

ಮುಂದಿನ 2ಠಿ ಶಕ್ತಿಹಂತದಲ್ಲಿ ಪರಸ್ಪರ ಲಂಬಕೋನಗಳಲ್ಲಿರುವ ಮೂರು ಕಕ್ಷೇಯಗಳಿವೆ. ಪ್ರತಿ ಕಕ್ಷೇಯವೂ x,ಥಿ,z ಆಕಾಶ ಅಕ್ಷಗಳ (ಸ್ಪೇಷಿಯಲ್ ಆಕ್ಸಿಸ್) ಮೇಲಿದ್ದು ಎರಡು ಭಾಗಗಳಲ್ಲಿರುತ್ತವೆ. ಇದನ್ನು Px,Pಥಿ,Pz, ಕಕ್ಷೇಯಗಳೆಂದು ಕರೆದಿದೆ. Px ಕಕ್ಷೇಯದ ಎರಡು ಭಾಗಗಳು x ಅಕ್ಷದ ಮೇಲೆ ಬೀಜದ ಎಡಬಲ ಭಾಗಗಳಲ್ಲಿದ್ದು ಪ್ರತಿಭಾಗವೂ ಗೋಳಾಕಾರವಾಗಿದೆ. ಎಂದರೆ Px ನ ಪೂರ್ಣ ಆಕಾರ ಎರಡು ಗೋಳಗಳು ಬೀಜದಲ್ಲಿ ಪರಸ್ಪರ ತಗುಲಿದಂತಿದೆ. Pಥಿ ಮತ್ತು Pz ಕಕ್ಷೇಯಗಳ ಆಕೃತಿಯೂ ಇದೇ ರೀತಿ ಇದೆ. ಆದರೆ ಅವುಗಳ ಇರುವಿಕೆಯ ಅಕ್ಷಗಳು ಥಿ ಮತ್ತು z ಅಕ್ಷಗಳು. 

ಚಿತ್ರ-4-ಕಕ್ಷೇಯಗಳು

ಇಂಗಾಲದ ಪರಮಾಣು ಆರು ವಿದ್ಯುತ್ಕಣಗಳನ್ನು ಪಡೆದಿದ್ದು ಅವುಗಳಲ್ಲಿ ಮೊದಲ ನಾಲ್ಕು ಯಾವ ಯಾವ ಕಕ್ಷೇಯದಲ್ಲಿ ಹಂಚಿಕೆಯಾಗಿರುತ್ತವೆಂಬುದನ್ನು ಈಗ ಅರಿತಿದ್ದೇವೆ. ಉಳಿದ ಇನ್ನೆರಡು ವಿದ್ಯುತ್ಕಣಗಳು ಸಮಾನ ಶಕ್ತಿಯನ್ನುಳ್ಳ ಎರಡು ಠಿ ಕಕ್ಷೇಯಗಳಲ್ಲಿ ಒಂದೊಂದರಲ್ಲಿ ಒಂದರಂತೆ ಹಂಚಿಕೆಯಾಗಿರುತ್ತವೆ. 2s ಕಕ್ಷೇಯದಲ್ಲಿ ಎರಡು ವಿದ್ಯುತ್ಕಣಗಳಿದ್ದು ಈ ಕಕ್ಷೇಯ ಪೂರ್ಣವಾಗಿ ತುಂಬಿದೆ. ಸಂಯೋಗರೀತಿಯ ನಿಯಮಗಳಿಗನುಗುಣವಾಗಿ ಈ ವಿದ್ಯುತ್ಕಣಗಳು ಬಂಧಗಳಲ್ಲಿ ಭಾಗವಹಿಸುವಂತಿಲ್ಲ. ಇಂಗಾಲದ ಪರಮಾಣುವಿನ ವೇಲೆನ್ಸಿ 2ಠಿ ಕಕ್ಷೇಯಗಳಲ್ಲಿ ಎರಡರಲ್ಲಿ ಪ್ರತಿಯೊಂದರಲ್ಲಿ ಒಂದೊಂದರಂತೆ ಇರುವ ಎರಡು ವಿದ್ಯುತ್ಕಣಗಳಲ್ಲಿ ಮಾತ್ರ ಅಡಕವಾಗಿದೆ ಎಂದಂತಾಯಿತು. ಇದರಿಂದ ಇಂಗಾಲದ ಸಂಯೋಗಶಕ್ತಿ ಎರಡೆಂದೂ ಠಿ ಕಕ್ಷೇಯಗಳು ಒಂದಕ್ಕೊಂದು ಲಂಬಕೋನದಲ್ಲಿರುವುದರಿಂದ ಇಂಗಾಲದ ಬಂಧಗಳು ಒಂದಕ್ಕೊಂದು ಲಂಬಕೋನದಲ್ಲಿ ಇವೆಯೆಂದೂ ಅರಿವಾಗುತ್ತದೆ. ಆದರೆ ಇದು ಸತ್ಯಕ್ಕೆ ದೂರವಾದ ವಿಷಯ. ಇಂಗಾಲದ ವೇಲೆನ್ಸಿ ನಾಲ್ಕೆಂದೂ ನಾಲ್ಕು ಬಂಧಗಳೂ ಆಕಾಶದಲ್ಲಿ ಸಮಾನ ಕೋನಾಂತರದಲ್ಲಿ ಪಸರಿಸಿ ಇಂಗಾಲಸಂಯುಕ್ತಗಳಲ್ಲಿ ಇಂಗಾಲದ ಪರಮಾಣು ಸಮಚತುರ್ಮುಖಿಯ (ರೆಗ್ಯುಲರ್ ಟೆಟ್ರಹೆಡ್ರನ್) ಆಕಾರವನ್ನು ತಳೆದಿರುತ್ತದೆಂದೂ ಶಕಲಬಲವಿಜ್ಞಾನದ (ಕ್ವಾಂಟಂ ಮೆಕ್ಯಾನಿಕ್ಸ್) ಉಗಮಕ್ಕಿಂತಲೂ ಎಷ್ಟೋ ಮೊದಲೇ ವಿವಿಧ ಪರಿಶೀಲನೆಗಳಿಂದ ತಿಳಿದಿತ್ತು. ಆದ್ದರಿಂದ ಸಂಯುಕ್ತಗಳಲ್ಲಿರುವ ಇಂಗಾಲದ ಪರಮಾಣುವಿನ ಸ್ವರೂಪ ಮುಕ್ತ ಇಂಗಾಲ ಪರಮಾಣುವಿನ ಸ್ವರೂಪಕ್ಕಿಂತಲೂ ಭಿನ್ನವಾಗಿರಬೇಕು. ಆದರೆ ಮೇಲೆ ವಿವರಿಸಿದ 1s22s22ಠಿxPಥಿ ಸ್ಥಿತಿಗಿಂತ ಭಿನ್ನವಾದ ಮತ್ತಾವ ಸ್ವರೂಪವೇ ಆದರೂ ಮುಕ್ತ ಇಂಗಾಲಕ್ಕಿಂತಲೂ ಹೆಚ್ಚು ಪ್ರಚ್ಛನ್ನಶಕ್ತಿಯನ್ನು (ಪೊಟೆನ್ಯಿಯಲ್ ಎನರ್ಜಿ) ಪಡೆದಿರುತ್ತದೆ. ಕನಿಷ್ಠ ಪ್ರಚ್ಛನ್ನಶಕ್ತಿಯನ್ನುಳ್ಳ ಸ್ವರೂಪ ಇತರ ಯಾವುದೇ ಸ್ವರೂಪಕ್ಕಿಂತಲೂ ಸ್ಥಿರವಾದುದು. ಆದ್ದರಿಂದ ಹೆಚ್ಚು ಶಕ್ತಿಯ ಬಿಡುಗಡೆಗೆ ಕಾರಣವಾಗುವ ಮತ್ತೊಂದು ಘಟನೆ ಇರಬೇಕು. ಸ್ಥಿರ ಬಂಧಗಳ ನಿರ್ಮಾಣ ಇಂಥದೊಂದು ಘಟನೆ. ಪರಮಾಣುಗಳ ಕಕ್ಷೇಯಗಳು ಬಳಿಸಾರಿ ಒಂದರ ಮೇಲೊಂದು ವ್ಯಾಪಿಸಿ ಏಕವಾಗುವುದರಿಂದ ಬಂಧ ನಿರ್ಮಾಣವಾಗುತ್ತದೆ. ಹೀಗೆ ಅವು ಏಕವಾದಾಗ ಹಳೆಯ ಎರಡು ಪರಮಾಣು ಕಕ್ಷೇಯಗಳು ಮಾಯವಾಗಿ ಹೊಸದೊಂದು ಕಕ್ಷೇಯ ಸೃಷ್ಟಿಯಾಗುತ್ತದೆ. ಈ ಕಕ್ಷೇಯ ಯಾವೊಂದು ಪರಮಾಣುವಿಗೂ ಸೇರಿದುದಲ್ಲವಾದ್ದರಿಂದ ಅದನ್ನು ಅಣು ಕಕ್ಷೇಯ (ಮಾಲೆಕ್ಯುಲರ್ ಆರ್ಬಿಟಲ್) ಎಂದು ಕರೆದಿದೆ. ಸ್ಥಿರಬಂಧ ನಿರ್ಮಾಣದಲ್ಲಿ ಹೊಸ ಕಕ್ಷೇಯದ ಶಕ್ತಿ (ಎಂದರೆ ಅದರಲ್ಲಿನ ವಿದ್ಯುತ್ಕಣಗಳ ಪ್ರಚ್ಛನಶಕ್ತಿ) ಹಳೆಯ ಪರಮಾಣು ಕಕ್ಷೇಯಗಳ ಶಕ್ತಿಗಿಂತ ಕಡಿಮೆ ಇದ್ದು ಬಂಧ ನಿರ್ಮಾಣವಾಗುವಾಗ ಶಕ್ತಿ ವಿಸರ್ಜನೆಯಾಗುತ್ತದೆ. ಎರಡು ಪರಮಾಣುಗಳ ನಡುವಣ ಅಣು ಕಕ್ಷೇಯವೊಂದರಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯುತ್ಕಣಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯುತ್ಕಣಗಳನ್ನುಳ್ಳ ಎರಡು ಪರಮಾಣು ಕಕ್ಷೇಯಗಳು ಬಂಧ ನಿರ್ಮಾಣಕಾರ್ಯದಲ್ಲಿ ಭಾಗವಹಿಸುವುದಾದರೆ, ಅಂಥ ಕಕ್ಷೇಯಗಳಲ್ಲಿ ಒಂದೊಂದೇ ವಿದ್ಯುತ್ಕಣವಿರಬೇಕಾಗುತ್ತದೆ. ಆದ್ದರಿಂದಲೇ ಎರಡು ವಿದ್ಯುತ್ಕಣಗಳನ್ನುಳ್ಳ ಇಂಗಾಲದ 2s ಕಕ್ಷೇಯ ಬಂಧನಿರ್ಮಾಣದಲ್ಲಿ ಪಾಲುಗೊಳ್ಳಲು ಸಾಧ್ಯವಿಲ್ಲ. 

ಈಗ ಇಂಗಾಲಸಂಯುಕ್ತಗಳಲ್ಲಿ ಇಂಗಾಲ ಪರಮಾಣುವಿನ ಸ್ವರೂಪವನ್ನು ಪ್ರತ್ಯೇಕವಾಗಿ ಪರಿಶೀಲಿಸಬಹುದು. ಇಂಗಾಲದ ವೇಲೆನ್ಸಿ 4. ಆದ್ದರಿಂದ ವೇಲೆನ್ಸಿಗೆ ಕಾರಣವಾದ ಎರಡನೆಯ ಮುಖ್ಯವಲಯದ ನಾಲ್ಕು ವಿದ್ಯುತ್ಕಣಗಳೂ ಬೇರೆ ಬೇರೆ ಕಕ್ಷೇಯಗಳಲ್ಲಿರಬೇಕು. ಹೀಗಾಗಲು 2s ಕಕ್ಷೇಯದಲ್ಲಿರುವ ವಿದ್ಯುತ್ಕಣವೊಂದು ಹೊಸ ಕಕ್ಷೇಯವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಅದು ಮರುಹಂತದ ಇನ್ನೂ ತೆರವಾಗಿರುವ ಒಂದು 2ಠಿ ಕಕ್ಷೇಯವನ್ನು ಸೇರುತ್ತದೆಂದು ಭಾವಿಸಬಹುದು. ಹೀಗೆ ಒಂದು ವಿದ್ಯುತ್ಕಣ ಕೆಳಗಿನ ಶಕ್ತಿಮಟ್ಟಕ್ಕಿಂತ (2s) ಹೆಚ್ಚಿನ ಶಕ್ತಿ ಮಟ್ಟಕ್ಕೆ (2ಠಿ) ಏರಲು ಶಕ್ತಿಯನ್ನು ಪೂರೈಸಬೇಕಾಗುತ್ತದೆ. ಆದರೆ ಈಗ ಎರಡರ ಬದಲು ನಾಲ್ಕು ಬಂಧಗಳು ನಿರ್ಮಾಣವಾಗುವುದರಿಂದ ಶಕ್ತಿ ವಿಸರ್ಜನೆಯೂ ಹೆಚ್ಚುತ್ತದೆ. ಹೀಗೆ ವಿಸರ್ಜನೆಯಾದ ಶಕ್ತಿ ವಿದ್ಯುತ್ಕಣವೊಂದರ ಶಕ್ತಿ ಮಟ್ಟವನ್ನು ಹೆಚ್ಚಿಸಲು ಬೇಕಾಗುವುದಕ್ಕಿಂತಲೂ ಹೆಚ್ಚಾಗಿದ್ದರೆ ಭಾವಿಸಿರುವಂತೆ ಒಂದು 2s ವಿದ್ಯುತ್ಕಣದ ಶಕ್ತಿಮಟ್ಟ ಹೆಚ್ಚಿ ನಾಲ್ಕು ಬಂಧಗಳು ನಿರ್ಮಾಣವಾಗಬಹುದು. ಶಕ್ತಿ ಪರಿಗಣನೆಗಳಿಂದ ನಾಲ್ಕು ಬಂಧಗಳ ನಿರ್ಮಾಣ ಹೀಗೆ ಸಾಧ್ಯವಾದರೂ ಇಂಗಾಲಸಂಯುಕ್ತಗಳಲ್ಲಿನ ಇಂಗಾಲದ ಪರಮಾಣುವಿನ ಬಂಧಗಳು ಈ ಬಗೆಯ ಬಂಧಗಳಿಗಿಂತ ಸ್ಥಿರವಾದವುಗಳೆಂದು ಶಕಲಬಲವಿಜ್ಞಾನ ಲೆಕ್ಕಾಚಾರಗಳಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಬಂಧಗಳು ಈ ಬಗೆಯಾಗಿ ನಿರ್ಮಾಣವಾಗಿದ್ದಲ್ಲಿ ಠಿ ಹಂತದ ವಿದ್ಯುತ್ಕಣಗಳು ಭಾಗವಹಿಸಿದ ಮೂರು ಬಂಧಗಳ ಶಕ್ತಿ ಒಂದಾಗಿದ್ದು s ಹಂತದ ವಿದ್ಯುತ್ಕಣದಿಂದಾದ ಬಂಧದ ಶಕ್ತಿ ಬೇರೆಯಾಗಿರಬೇಕಾಗಿತ್ತು. ಅಲ್ಲದೆ ಮೂರು ಬಂಧಗಳು ಒಂದಕ್ಕೊಂದು ಲಂಬಕೋನದಲ್ಲಿದ್ದು ಕಡೆಯ ಬಂಧ ದಿಗ್ರಹಿತ ಬಂಧವಾಗಿರಬೇಕಾಗಿತ್ತು. ಆದರೆ ಇಂಗಾಲದ ಬಂಧಗಳು ನಾಲ್ಕೂ ಸಮಾನ ಶಕ್ತಿಯುಳ್ಳವು ಮತ್ತು ನಾಲ್ಕರ ದಿಕ್ಕುಗಳೂ ನಿರ್ದಿಷ್ಟವಾಗಿದ್ದು ಬಂಧಗಳ ನಡುವಿನ ಕೋನಾಂತರ 109028, ಆದ್ದರಿಂದ 2s ಮತ್ತು 2ಠಿ ಕಕ್ಷೇಯಗಳ ಶಕ್ತಿ ಮತ್ತು ಸ್ವರೂಪಗಳಲ್ಲಿ ತೀವ್ರ ಬದಲಾವಣೆಗಳಾಗುವುದು ಆವಶ್ಯಕ. ಸಂಯುಕ್ತ ಸ್ವರೂಪದಲ್ಲಿ ತಮ್ಮ ಪ್ರಚ್ಛನ್ನಶಕ್ತಿಯನ್ನು ಆದಷ್ಟುಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಪರಮಾಣು ಕಕ್ಷೇಯಗಳು ಹೊಸ ವಿಧಾನವನ್ನು ಅನುಸರಿಸುತ್ತವೆ. ಕಕ್ಷೇಯಗಳ ಮೇರೆಗಳು ಹಲವು ನಿಯಮಗಳಿಗೆ ಒಳಪಟ್ಟಿದ್ದರೂ ಶಕ್ತಿಯ ಪೂರೈಕೆ ವಿಸರ್ಜನೆಗಳಿಂದ ಅವು ಬದಲಾಗಬಹುದು. ಇಂಗಾಲದ ಪರಮಾಣುವಿನ 2s ಮತ್ತು ಮೂರು 2ಠಿ ಕಕ್ಷೇಯಗಳು ಮಿಶ್ರಗೊಂಡು ನಾಲ್ಕು ಹೊಸದಾದ ಸರಿಸಮ ಶಕ್ತಿ ಮತ್ತು ಆಕಾರಗಳನ್ನುಳ್ಳ ಸಂಕರ ಕಕ್ಷೇಯಗಳ (ಹೈಬ್ರಿಡ್ ಆರ್ಬಿಟಲ್ಸ್) ಸೃಷ್ಟಿಯಾಗುತ್ತದೆ. ಈ ಸಂಕರ ಕಕ್ಷೇಯಗಳ ವ್ಯಾಪ್ತಿ s ಮತ್ತು ಠಿ ಕಕ್ಷೇಯಗಳೆರಡರ ವ್ಯಾಪ್ತಿಗಳಿಗಿಂತಲೂ ಹೆಚ್ಚಿದ್ದು ತಮ್ಮ ಪ್ರಭಾವವನ್ನು ಬೀಜದಿಂದ ಇನ್ನೂ ಸ್ವಲ್ಪ ಹೆಚ್ಚು ದೂರ ಹರಡಬಲ್ಲವಾದ್ದರಿಂದ ಈ ಬಗೆಯ ಕಕ್ಷೇಯಗಳು ಭಾಗವಹಿಸಿರುವ ಬಂಧಗಳು s ಅಥವಾ ಠಿ ಕಕ್ಷೇಯಗಳಿಂದ ಉಂಟಾಗುವ ಬಂಧಗಳಿಗಿಂತ ಸ್ಥಿರವಾದವು-ಎಂದರೆ ಕಡಿಮೆ ಶಕ್ತಿ ಮಟ್ಟದವು ಅಥವಾ ಇವುಗಳ ನಿರ್ಮಾಣದಲ್ಲಿ ಇನ್ನೂ ಅಧಿಕ ಶಕ್ತಿ ವಿಸರ್ಜನೆಯಾಗುತ್ತದೆ. 

ಚಿತ್ರ-5

ಶಕಲಬಲವಿಜ್ಞಾನದ ಲೆಕ್ಕಾಚಾರಗಳು ಶಕ್ತಿವೆಚ್ಚ, ಶಕ್ತಿವಿಸರ್ಜನೆಗಳೆರಡನ್ನೂ ಪರಿಗಣನೆಗೆ ತೆಗೆದುಕೊಂಡು ಈ ಬಗೆಯ sಠಿ3 ಎಂದೆನ್ನಿಸಿಕೊಳ್ಳುವ ಸಂಕರ ಕಕ್ಷೇಯಗಳಿಂದ ನಿರ್ಮಾಣವಾಗುವ ಬಂಧಗಳು ಕನಿಷ್ಠ ಶಕ್ತಿಮಟ್ಟದವೆಂದು ತೋರಿಸಿವೆ. sಠಿ3 ಸಂಕರಕಕ್ಷೇಯಗಳು ಆಕಾಶದಲ್ಲಿ ಸರಿಸಮನಾಗಿ ಹರಡಿಕೊಂಡಿದ್ದು ಯಾವುದೇ ಎರಡು ಕಕ್ಷೇಯಗಳ ನಡುವಿನ ಕೋನಾನಂತರ 109028 ಆಗಿದೆ.  ಇಂಗಾಲಸಂಯುಕ್ತಗಳಲ್ಲಿ ಬಂಧಗಳ ನಡುವೆ ಇದೇ ಕೋನಾಂತರ ಇರುವುದನ್ನು ಸಂಕರಕಕ್ಷೇಯಗಳ ವಾದ ಸಮರ್ಪಕವಾಗಿ ವಿವರಿಸುತ್ತದೆ. ಸಂಯುಕ್ತರೂಪದಲ್ಲಿರುವ ಇಂಗಾಲಪರಮಾಣು ಎಂದರೆ sಠಿ3 ಸಂಕರಕಕ್ಷೇಯಗಳನ್ನುಳ್ಳ ಇಂಗಾಲ ಪರಮಾಣುವನ್ನು ಸಮ ಚತುರ್ಮುಖಿಯೊಂದರ ಮಧ್ಯಭಾಗದಲ್ಲಿರುವಂತೆಯೂ ಅದರ ಬಂಧಗಳು ಅಥವಾ ಕಕ್ಷೇಯಗಳು ಚತುರ್ಮುಖಿಯ ನಾಲ್ಕು ಮೂಲೆಗಳ ಕಡೆಗೆ ಚಾಚಿಕೊಂಡಿರುವಂತೆಯೂ ಭಾವಿಸಬಹುದು. ಈ ಬಗೆಯ ನಿರೂಪಣೆ ಏಕಬಂಧಗಳನ್ನುಳ್ಳ ಇಂಗಾಲ ಪರಮಾಣುವಿನ ಸ್ವರೂಪವನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸುತ್ತದೆ. 

ಆದರೆ ದ್ವಿಬಂಧವನ್ನುಳ್ಳ ಇಂಗಾಲ ಪರಮಾಣುವಿನ ಸ್ವರೂಪ ಇದಕ್ಕಿಂತ ಭಿನ್ನವಾಗಿದ್ದು, ಇದರಲ್ಲಿ ಇಂಗಾಲದ ಸುತ್ತಲೂ ಕೇವಲ ಮೂರು ಇತರ ಪರಮಾಣುಗಳು ಒಂದೇ ಸಮತಲದಲ್ಲಿದ್ದು ಬಂಧಕೋನಗಳು (ಬಾಂಡ್ ಆಂಗಲ್ಸ್) 1200 ಇರುತ್ತವೆ. ದ್ವಿಬಂಧ ಪರಿಸ್ಥಿತಿಯಲ್ಲಿರುವ ಇಂಗಾಲ ಪರಮಾಣುಗಳಲ್ಲಿ ಆಗುವ ಕಕ್ಷೇಯ ಸಂಕರ sಠಿ2 ಮಾದರಿಯದು. ಎಂದರೆ ಒಂದು s ಕಕ್ಷೇಯ ಮತ್ತು ಎರಡು ಠಿ ಕಕ್ಷೇಯಗಳ ಮಿಶ್ರಣದಿಂದ ಆದುದು. ಹೊಸ ಏಕರೀತಿಯ ಮೂರು ಸಂಕರ ಕಕ್ಷೇಯಗಳು ಒಂದೇ ಸಮತಲದಲ್ಲಿದ್ದು ಅವುಗಳ ಅಕ್ಷಾಂತರ ಕೋನಗಳು 1200 ಇರುತ್ತವೆ. ಈ ಸಂಕರ ಕಕ್ಷೇಯಗಳಲ್ಲಿ ಪ್ರತಿಯೊಂದರಲ್ಲೂ ಒಂದೊಂದು ವಿದ್ಯುತ್ಕಣವಿದ್ದು ನಾಲ್ಕನೆಯ ವಿದ್ಯುತ್ಕಣ ಸಂಕರದಲ್ಲಿ ಭಾಗವಹಿಸದ sಠಿ2ಸಂಕರ ಕಕ್ಷೇಯಗಳನ್ನುಳ್ಳ ಸಮತಲಕ್ಕೆ ಲಂಬಕೋನದಲ್ಲಿರುವ ಠಿ ಕಕ್ಷೇಯದಲ್ಲಿರುತ್ತದೆ. (ಚಿತ್ರ 5).

ತ್ರಿಬಂಧವುಳ್ಳ ಇಂಗಾಲದ ಪರಮಾಣುವಿನಲ್ಲಿ ಆಗುವ ಕಕ್ಷೇಯ ಸಂಕರ ಎರಡೇ ಕಕ್ಷೇಯಗಳಿಂದ ಆದದ್ದಾಗಿ sಠಿ ಸಂಕರ ಎಂದೆನ್ನಿಸಿಕೊಳ್ಳುತ್ತದೆ. ಎರಡು ಸಮಾನ sಠಿ ಸಂಕರ ಕಕ್ಷೇಯಗಳಲ್ಲಿ ಎರಡು ವಿದ್ಯುತ್ಕಣಗಳೂ ಸಂಕರದಲ್ಲಿ ಭಾಗವಹಿಸದ ಎರಡು ಠಿ ಕಕ್ಷೇಯಗಳಲ್ಲಿ ಒಂದೊಂದರಲ್ಲಿ ಒಂದೊಂದರಂತೆ ಉಳಿದ ಇನ್ನೆರಡು ವಿದ್ಯುತ್ಕಣಗಳೂ ಇರುತ್ತವೆ. sಠಿ ಸಂಕರ ಕಕ್ಷೇಯಗಳು ಒಂದೇ ನೇರದಲ್ಲಿದ್ದು ಬೀಜದ ಇಬ್ಬದಿಗಳಲ್ಲಿಯೂ ಇರುತ್ತವೆ. ಅಸಂಕರ ಠಿ ಕಕ್ಷೇಯಗಳೆರಡೂ ಪರಸ್ಪರ ಲಂಬಕೋನಗಳಲ್ಲಿರುವುದು ಮಾತ್ರವಲ್ಲದೆ ಎರಡೂ ಸಂಕರ ಕಕ್ಷೇಯಗಳ ಅಕ್ಷಕ್ಕೆ ಲಂಬಕೋನಗಳಲ್ಲಿರುತ್ತವೆ. 

sಠಿ3, sಠಿ2 ಮತ್ತು sಠಿ, ಸಂಕರ ಕಕ್ಷೇಯಗಳು ಬಂಧಗಳಲ್ಲಿ ಹೇಗೆ ಭಾಗವಹಿಸುತ್ತವೆಂಬುದನ್ನು ಮೀಥೇನ್, ಎಥಿಲೀನ್ ಮತ್ತು ಅಸಿಟಲೀನ್ ಸಂಯುಕ್ತಗಳನ್ನು ನಿದರ್ಶನಗಳಾಗಿ ತೆಗೆದುಕೊಂಡು ಪರಿಶೀಲಿಸಬಹುದು. 

ಅಊ4 ಎಂಬ ಸೂತ್ರವಿರುವ ಮೀಥೇನಿನಲ್ಲಿ ಇಂಗಾಲ ನಾಲ್ಕು ಏಕಬಂಧಗಳಿಂದ ನಾಲ್ಕು ಹೈಡ್ರೊಜನ್ನುಗಳಿಗೆ ಬಂಧವಾಗಿರುತ್ತದೆ. ಇದರಲ್ಲಿ ಇಂಗಾಲದ ಸಂಕರಕಕ್ಷೇಯರೂಪ sಠಿ3. ಹೈಡ್ರೊಜನ್ನಿನಲ್ಲಿ ಟs ಕಕ್ಷೇಯವೊಂದೇ ಇದ್ದು ಅದರಲ್ಲಿ ಒಂದು ವಿದ್ಯುತ್ಕಣವಿದೆ. ಹೈಡ್ರೊಜನ್ ಪರಮಾಣುವೊಂದು ಇಂಗಾಲದ ಸಂಕರ ಕಕ್ಷೇಯದ ಅಕ್ಷದಲ್ಲಿಯೇ ಇಂಗಾಲದ ಪರಮಾಣುವನ್ನು ಸಮೀಪಿಸಿದಾಗ ಎರಡು ಪರಮಾಣು ಕಕ್ಷೇಯಗಳು ಒಂದಾಗಿ ಅಣುಕಕ್ಷೇಯ ಮತ್ತು ಅ-ಊ ಬಂಧವೊಂದರ ಸೃಷ್ಟಿಯಾಗುತ್ತದೆ. ನಾಲ್ಕು ಅ-ಊ ಬಂಧಗಳೂ ಇದೇ ರೀತಿ ನಿರ್ಮಾಣವಾಗಿ ಅಊ4 ಅಣುವಿನ ಉತ್ಪತ್ತಿಯಾಗುತ್ತದೆ. ಹೀಗೆ ಪರಮಾಣುಗಳ ಕಕ್ಷೇಯ ಒಂದೇ ಅಕ್ಷದಲ್ಲಿ ಪರಸ್ಪರ ಸಮೀಪಿಸಿ ನಿರ್ಮಾಣವಾಗುವ ಬಂಧ  ಬಂಧವೆನ್ನಿಸಿಕೊಳ್ಳುತ್ತದೆ. ಮೀಥೇನಿನಲ್ಲಿರುವ ನಾಲ್ಕು ಬಂಧಗಳೂ  ಬಂಧಗಳು. 

ಚಿತ್ರ-6

ಎಥಿಲೀನಿನಲ್ಲಿ (ಊ2ಅ=ಅಊ2) ಪ್ರತಿ ಇಂಗಾಲ ಪರಮಾಣುವೂ ಮೂರು ಇತರ ಪರಮಾಣುಗಳಿಗೆ ಬಂಧಗೊಂಡಿದೆ. ಇದರಲ್ಲಿ ಇಂಗಾಲಗಳ ಸಂಕರ ಕಕ್ಷೇಯ ರೂಪ sಠಿ2. ಪ್ರತಿ ಇಂಗಾಲವೂ ಮತ್ತೊಂದು ಇಂಗಾಲ ಮತ್ತು ಎರಡು ಹೈಡ್ರೊಜನ್ನುಗಳೊಡನೆ  ಬಂಧದ ಮೂಲಕ ಬಂಧಗೊಂಡಿರುತ್ತದೆ (ಚಿತ್ರದಲ್ಲಿ  ಬಂಧಗಳನ್ನು ಗೆರೆಗಳ ಮೂಲಕ ತೋರಿಸಿದೆ). ಅ-ಅ ಮತ್ತು ನಾಲ್ಕು ಅ-ಊ ಬಂಧಗಳು ಒಂದೇ ಸಮತಲದಲ್ಲಿವೆ. ಎರಡು ಇಂಗಾಲಗಳ ಉಳಿದ ಠಿ ಕಕ್ಷೇಯಗಳು ಈ ಸಮತಲಕ್ಕೆ ಲಂಬಕೋನದಲ್ಲಿವೆ. ಇವೆರಡು ಕಕ್ಷೇಯಗಳ ಅಕ್ಷಗಳು ಬೇರೆ ಬೇರೆಯಾಗಿದ್ದರೂ ಎರಡು ಇಂಗಾಲಗಳ ನಡುವಿನ  ಬಂಧ ಅವನ್ನು ಸಮೀಪಕ್ಕೆ ತರುವುದರಿಂದ ಠಿ ಕಕ್ಷೇಯಗಳು ಒಂದರ ಮೇಲೊಂದು ವ್ಯಾಪಿಸಿ ಅಣು ಕಕ್ಷೇಯವೊಂದು ಸೃಷ್ಟಿಯಾಗಿ ಬಂಧ ಏರ್ಪಡುತ್ತದೆ. ಈ ಬಗೆಯ P-P ಕಕ್ಷೇಯಗಳು ಸೇರಿ ಆಗುವ ಬಂಧದ ಹೆಸರು  ಬಂಧ.  ಬಂಧದ ಅಣು ಕಕ್ಷೇಯ ಎರಡು ಭಾಗಗಳಾಗಿದ್ದು  ಬಂಧಗಳನ್ನುಳ್ಳ ಸಮತಲದ ಮೇಲೆ ಮತ್ತು ಕೆಳಗೆ ಒಂದೊಂದು ಭಾಗವಿದೆ
sಠಿ ಸಂಕರ ಕಕ್ಷೇಯವಿರುವ ಅಸಿಟಲೀನಿನಲ್ಲಿ ಒಂದು ಅ-ಅ ಬಂಧ ಮತ್ತು ಎರಡು ಅ-ಊ ಬಂಧಗಳು  ಬಂಧಗಳು. 

ಚಿತ್ರ-7

ಸಂಕರದಲ್ಲಿ ಭಾಗವಹಿಸದೆ ಉಳಿದಿರುವ ನಾಲ್ಕು (ಪ್ರತಿ ಇಂಗಾಲದ ಎರಡೆರಡು) ಕಕ್ಷೇಯಗಳು ಸೇರಿ ಎಥಿಲೀನಿನಲ್ಲಿ ಆದಂತೆ ಎರಡು ಟಿ ಬಂಧಗಳು ನಿರ್ಮಾಣವಾಗುತ್ತವೆ. 

ಚಿತ್ರ-8

 	ಚಿತ್ರದಲ್ಲಿ ಎರಡು ( ಬಂಧಗಳನ್ನೂ ಅಣು ಕಕ್ಷೇಯಗಳ ಮೂಲಕ ತೋರಿಸುವುದು ಕಷ್ಟವಾದ್ದರಿಂದ ಕಕ್ಷೇಯಗಳ ಅಕ್ಷಗಳನ್ನು ಮಾತ್ರ ತೋರಿಸಿ ಯಾವ ಯಾವ ಕಕ್ಷೇಯಗಳು ಪರಸ್ಪರ ವ್ಯಾಪಿಸಿ ಬಂಧಗಳನ್ನು ನಿರ್ಮಾಣಮಾಡುತ್ತವೆಂಬುದನ್ನು ತೋರಿಸಿದೆ. 

ಚಿತ್ರ-9

ಇಂಗಾಲಸಂಯುಕ್ತಗಳ ಆಕಾರದ ಸ್ಪಷ್ಟೀಕರಣದ ಅಧ್ಯಯನವಾದ ಪರಮಾಣು ವಿನ್ಯಾಸರಸಾಯನಶಾಸ್ತ್ರ (ಸ್ಟೀರಿಯೋ ಕೆಮಿಸ್ಟ್ರಿ) ಇಂಗಾಲ ರಸಾಯನಶಾಸ್ತ್ರದ ಒಂದು ಮುಖ್ಯಭಾಗ. ಸಂಯುಕ್ತಗಳು ಜಟಿಲವಾದಂತೆ ಅವುಗಳ ಆಕಾರ ಸ್ಪಷ್ಟೀಕರಣದ ಸಮಸ್ಯೆಯೂ ಜಟಿಲವಾಗುತ್ತ ಹೋಗುತ್ತದೆ. ಆಕಾರಗಳು ಸಂಯುಕ್ತಗಳ ಲಕ್ಷಣಗಳ ಮೇಲೆ ಪ್ರಭಾವ ಬೀರುವುದರಿಂದ ಅವುಗಳ ಅಧ್ಯಯನ ಅನೇಕ ಬಾರಿ ಅತ್ಯಾವಶ್ಯಕ. 
ನಾಮಕರಣ ನಿಯಮಗಳು (ನೋಮೆನ್ ಕ್ಲೇಚರ್ ರೂಲ್ಸ್) : ಇಂಗಾಲ ಸಂಯುಕ್ತಗಳ ಸಂಖ್ಯೆ ಅಧಿಕವಾಗಿರುವುದರಿಂದಲೂ ಸಮಘಟಕಗಳ ಇರುವಿಕೆಯಿಂದಲೂ ಇಂಗಾಲಸಂಯುಕ್ತಗಳನ್ನು ಹೆಸರಿಸಲು ಕ್ರಮಬದ್ಧನಿಯಮಗಳು ಅಗತ್ಯವಾಗುತ್ತವೆ. ಕಡಿಮೆ ಸಂಯುಕ್ತಗಳ ಪರಿಚಯವಿದ್ದಾಗ ಬಳಕೆಯಲ್ಲಿದ್ದು ಸಮರ್ಪಕವಾಗಿದ್ದ ಹಳೆಯ ಪದ್ಧತಿಯೊಂದು ಈಗಲೂ ತಕ್ಕಮಟ್ಟಿಗೆ ಉಪಯೋಗದಲ್ಲಿದೆ. ಈ ಪದ್ಧತಿಯ ಪ್ರಕಾರ ಸಂಯುಕ್ತದಲ್ಲಿನ ಒಟ್ಟು ಇಂಗಾಲದ ಪರಮಾಣುಗಳ ಸಂಖ್ಯೆ ಮುಖ್ಯ. ಉದಾಹರಣೆಗೆ, ನಾಲ್ಕು ಇಂಗಾಲವನ್ನುಳ್ಳ ಎರಡು ಪರ್ಯಾಪ್ತ ಹೈಡ್ರೊಕಾರ್ಬನ್ನುಗಳೂ ಬ್ಯೂಟೇನ್ನುಗಳೇ. ಅಂತೆಯೇ ಐದು ಇಂಗಾಲಗಳಿರುವ ಎಲ್ಲ ಪರ್ಯಾಪ್ತ ಹೈಡ್ರೊಕಾರ್ಬನ್ನುಗಳೂ ಪೆಂಟೇನುಗಳು. ಈ ನಿಯಮದ ಪ್ರಕಾರ ಕರೆಯಲ್ಪಡುವ ಮೊದಲ ಹತ್ತು ಪರ್ಯಾಪ್ತ ಹೈಡ್ರೊಕಾರ್ಬನ್ನುಗಳ ಹೆಸರುಗಳನ್ನು ಮುಂದೆ ತೋರಿಸಲಾಗಿದೆ. 

     ಇಂಗಾಲ 
 ಪರಮಾಣುಗಳ 
  ಸಂಖ್ಯೆ 

          ಅಣುಸೂತ್ರ 

          ಹೆಸರು 

     
     1
     2
     3
     4
     5
     6
     7
     8
     9
    10

            ಅಊ4
              ಅ2ಊ6
              ಅ3ಊ8
         ಅ4ಊ10
         ಅ5ಊ12
         ಅ6ಊ14
         ಅ7ಊ16
         ಅ8ಊ18
         ಅ9ಊ20
        ಅ10ಊ22 

      ಮೀಥೇನ್ 
   ಈಥೇನ್ 
   ಪ್ರೊಪೇನ್ 
   ಬ್ಯೂಟೇನ್
   ಪೆಂಟೇನ್ 
   ಹೆಕ್ಸೇನ್ 
   ಹೆಪ್ಟೇನ್ 
   ಆಕ್ಟೇನ್ 
   ನೋನೇನ್ 
   ಡೆಕೇನ್ 

ಐದು ಇಂಗಾಲಗಳನ್ನುಳ್ಳ ಮೂರು ಸಮಘಟಕಗಳಿಗೆ ಕೆಳಗೆ ತೋರಿಸಿರುವ ಮೂರು ಹೆಸರುಗಳನ್ನು ಕೊಡಲಾಗಿತ್ತು. 

        ಅಊ3-ಅಊ2-ಅಊ2-ಅಊ2-ಅಊ3      ನಾರ್ಮಲ್ ಪೆಂಟೇನ್ 
                   ಅಊ3-ಅಊ2-ಅಊ-ಅಊ3          } 
                                   |	            }       ಐಸೋಪೆಂಟೇನ್ 
                               ಅಊ3              }

                                ಅಊ3
                                      |
                             ಅಊ2-  ಅ - ಅಊ3            ನಿಯೋಪೆಂಟೇನ್ 
                                      |
                                    ಅಊ3         

ಆದರೆ ಹೆಕ್ಸೇನ್ ಮತ್ತು ಅದಕ್ಕಿಂತ ಹಿರಿಯಗಾತ್ರದ ಹೈಡ್ರೊಕಾರ್ಬನ್ನುಗಳ ಸಮಘಟಕಗಳು ಅಧಿಕ ಸಂಖ್ಯೆಯಲ್ಲಿವೆ. ( 5 ಹೆಕ್ಸೇನುಗಳು, 9 ಹೆಪ್ಟೇನುಗಳು, 75 ಡೆಕೇನುಗಳು ಇತ್ಯಾದಿ). ಹಳೆಯ ಪದ್ಧತಿಯ ಪ್ರಕಾರ ಹೆಚ್ಚು ಸಂಖ್ಯೆಯ ಸಮಘಟಕಗಳಿಗೆ ಹೆಸರುಗಳನ್ನು ಕೊಡುವುದು ಬಲು ಕಷ್ಟವಾಗುತ್ತದೆ. ಆದ್ದರಿಂದ ಅನೇಕಾನೇಕ ಸಮಘಟಕಗಳಿಗೂ ಸಮರ್ಪಕವಾಗಿ ಹೆಸರು ಕೊಡಲು ಅನುಕೂಲವಾಗುವಂಥ ಒಂದು ಕ್ರಮಬದ್ಧನಿಯಮ ಆವಶ್ಯಕ. 
ಬಹುಕಾಲ ಈ ನಿಯಮಗಳ ಆವಶ್ಯಕತೆಯ ಬಗ್ಗೆ ವಿಜ್ಞಾನಿಗಳು ವಿಚಾರ ಮಾಡುತ್ತಿದ್ದರು. 1957ರಲ್ಲಿ ಇಂಟರ್‍ನ್ಯಾಷನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್ಲೈಡ್ ಕೆಮಿಸ್ಟ್ರಿ ಸಂಸ್ಥೆ ಈ ನಿಯಮಗಳ ಬಗೆಗೆ ಹಲವು ನಿರ್ಣಯಗಳನ್ನು ನೀಡಿತು. ಇವು ಈಗ ಜಗತ್ತಿನಾದ್ಯಂತ ಅಂಗೀಕೃತವಾಗಿವೆ. ಹಲವು ಮುಖ್ಯ ನಿರ್ಣಯ ನಿಯಮಗಳನ್ನು ಮುಂದೆ ಕೊಡಲಾಗಿದೆ. 
ಹೈಡ್ರೊಕಾರ್ಬನ್ನುಗಳು-ಅಚಕ್ರೀಯ ಸಂಯುಕ್ತಗಳು (ನಾನ್‍ಸೈಕ್ಲಿಕ್ ಆರ್ ಅಸೈಕ್ಲಿಕ್ ಕಾಂಪೌಂಡ್ಸ್) ಅಚಕ್ರೀಯ ಪರ್ಯಾಪ್ತ ಹೈಡ್ರೊಕಾರ್ಬನ್ನುಗಳು (ಆಲ್ಕೇನುಗಳು) : ಕವಲೊಡೆಯದ ನೇರ ಸರಣಿಯಲ್ಲಿರುವ ಹೈಡ್ರೊಕಾರ್ಬನ್ನುಗಳ ಹೆಸರುಗಳು ಹಳೆಯ ಪದ್ಧತಿಯಂತೆ ಇಂಗಾಲ ಪರಮಾಣುಗಳ ಸಂಖ್ಯೆಯನ್ನು ಅನುಸರಿಸುತ್ತವೆ. 
ಕವಲೊಡೆಯದ ಹೈಡ್ರೊಕಾರ್ಬನ್ನುಗಳಲ್ಲಿ ಅಂತಿಮ ಇಂಗಾಲದಿಂದ ಒಂದು ಹೈಡ್ರೊಜನ್ ನಷ್ಟವಾಗಿ ದೊರೆಯುವ ಒಂದು ವೇಲೆನ್ಸಿಯಿರುವ ಪುಂಜದ ಹೆಸರನ್ನು ಪಡೆಯಲು ಮಾತೃ ಸಂಯುಕ್ತದ ಹೆಸರಿನ ಆನ್ ಎಂಬ ಅಂತ್ಯ ಭಾಗವನ್ನು ಐಲ್ ಎಂಬ ಭಾಗದಿಂದ ಪಲ್ಲಟನೆ ಮಾಡಬೇಕು. ಈ ಬಗೆಯ ಪುಂಜಗಳು ನಾರ್ಮಲ್ ಆಲ್ಕೈಲ್ ಪುಂಜಗಳೆನ್ನಿಸಿಕೊಳ್ಳುತ್ತವೆ. ಉದಾಹರಣೆ : 
       ಅಊ3.ಅಊ2.ಅಊ2.ಅಊ2---ಬ್ಯೂಟೈಲ್ 
           ಅಊ3(ಅಊ2)10-ಅಊ2—ಡೊಡೆಕೈಲ್ 

ಕವಲೊಡೆದ ಸಂಯುಕ್ತದ ಹೆಸರು ಅತಿ ಉದ್ದದ ನೇರಸರಣಿಯ ಮಾತೃ ಸಂಯುಕ್ತದ ಹೆಸರನ್ನು ಅವಲಂಬಿಸಿದೆ. ಕವಲುಗಳನ್ನು ಆದೇಶಿತ (ಸಬ್ಸ್ಟಿಟ್ಯೂಟೆಡ್) ಆಲ್ಕೈಲ್ ಪುಂಜಗಳೆಂದು ಪರಿಗಣಿಸಬೇಕು. ಈ ಆದೇಶಿತ ಆಲ್ಕೈಲ್ ಪುಂಜದ ಸ್ಥಾನವನ್ನು ನಿರ್ದೇಶಿಸಲು ಮಾತೃ ಸಂಯುಕ್ತ ಸರಣಿಯ ಇಂಗಾಲಗಳಿಗೆ ಕ್ರಮಾಂಕಗಳನ್ನು ಕೊಡಬೇಕು. ಕ್ರಮಾಂಕಗಳನ್ನು ಎರಡು ಬಗೆಯಾಗಿ (ಬಲದಿಂದ ಮತ್ತು ಎಡದಿಂದ) ಕೊಡಬಹುದಾದ್ದರಿಂದ ಆದೇಶಿತ ಪುಂಜವನ್ನು ಪಡೆದಿರುವ ಇಂಗಾಲದ ಕ್ರಮಾಂಕ ಕನಿಷ್ಠವಾಗಿರುವಂತೆ ಕೊಡಬೇಕು. ಉದಾಹರಣೆ : 
              5   4   3   2   1 
                     ಅಊ3-ಅಊ2-ಅಊ2-ಅಊ.ಅಊ3
                               |            2-ಮೀಥೈಲ್ ಪೆಂಟೇನ್ 
                             ಅಊ3
                        ಅಥವಾ
                1  2   3   4   5           
              ಅಊ3-ಅಊ2-ಅಊ2-ಅಊ.ಅಊ3 
                           |              4-ಮೀಥೈಲ್ ಪೆಂಟೇನ್ 
                          ಅಊ3

ಇವುಗಳಲ್ಲಿ 4-ಮೀಥೈಲ್ ಪೆಂಟೇನ್ ಎಂಬ ಹೆಸರು ತಪ್ಪು. ಅಲ್ಲದೆ ಎರಡು ಆದೇಶಿತ ಆಲ್ಕೈಲ್ ಪುಂಜಗಳಲ್ಲಿ ಹಿರಿಯ ಗಾತ್ರದ ಪುಂಜಕ್ಕೆ ಕನಿಷ್ಠ ಕ್ರಮಾಂಕ ಬರುವಂತೆ ಹೆಸರು ಕೊಡಬೇಕು. ಉದಾಹರಣೆ :
   1(6)      2(5)     3(4)    4(3)       5(2)    6(1)
  ಅಊ2  -   ಅಊ2    -    ಅಊ   -  ಅಊ   -    ಅಊ2  -  ಅಊ3
             |     |
            ಅ2ಊ5   ಅಊ3             
3-ಮೀಥೈಲ್-4-ಈಥೈಲ್ ಹೆಕ್ಸೇನ್-ತಪ್ಪು
3-ಈಥೈಲ್-3-ಮೀಥೈಲ್ ಹೆಕ್ಸೇನ್-ಸರಿ
ಅಂತಿಮ ಇಂಗಾಲದಿಂದಲ್ಲದೆ ಮಧ್ಯಮ ಇಂಗಾಲವೊಂದರಿಂದ ಹೈಡ್ರೊಜನ್ ನಷ್ಟವಾಗಿ ಪುಂಜಗಳ ಸೃಷ್ಟಿಯಾದಾಗ ವೇಲೆನ್ಸಿಯಿರುವ ಇಂಗಾಲದಿಂದ ಆರಂಭಿಸಿ ಅತಿ ಉದ್ದನೆಯ ಸರಣಿಗೆ ಕ್ರಮಾಂಕಗಳನ್ನು ಕೊಡಬೇಕು ಮತ್ತು ಆದೇಶಿತ ಪುಂಜಗಳ ಸ್ಥಾನಗಳನ್ನು ನಿರ್ದೇಶಿಸಬೇಕು. ಉದಾಹರಣೆ : 
 4   3    2    1 
 ಅಊ3. ಅಊ2 . ಅಊ2 .ಅಊ-ಅಊ3                 1 - ಮೀಥೈಲ್ ಬ್ಯೂಟೈಲ್ 
			I
ಕವಲುಗಳು ಒಂದಕ್ಕಿಂತ ಅಧಿಕವಾಗಿದ್ದು ಅಲ್ಲಿ ಸಮಸಂಖ್ಯೆಯ ಇಂಗಾಲಗಳಿದ್ದರೆ ಅವುಗಳಲ್ಲಿ ಅತ್ಯಂತ ಜಟಿಲವಾದುದಕ್ಕೆ ಕನಿಷ್ಠ ಕ್ರಮಾಂಕ ದೊರೆಯಬೇಕು. ಇಲ್ಲವಾದರೆ ಪುಂಜಗಳ ಹೆಸರುಗಳ ಮೊದಲಕ್ಷರಗಳ (ಆಂಗ್ಲಭಾಷೆಯ) ಕ್ರಮದಲ್ಲಿ ಕ್ರಮಾಂಕ ನೀಡಬೇಕು. ಉದಾಹರಣೆ : 
         ಅಊ3                                ಅಊ3—ಅಊ2---ಅಊ---ಅಊ2---
       |                     |
    ಅಊ3-- ಅ----ಅಊ2 -        ಮತ್ತು               ಅಊ3
           |
          ಅಊ3

ಇವುಗಳಲ್ಲಿ ಮೊದಲನೆಯದರ ಕ್ರಮಾಂಕ ಎರಡನೆಯ ಪುಂಜದ ಕ್ರಮಾಂಕಕ್ಕಿಂತಲೂ ಮೊದಲು ಬರುತ್ತದೆ. 
ಹಲವು ಸರಳ ಪುಂಜಗಳನ್ನು ತಿಳಿಸುವಾಗ ಇಂಗ್ಲಿಷ್ ಅಕ್ಷರಮಾಲೆಯ ಕ್ರಮವನ್ನು ಅನುಸರಿಸಬಹುದು. ಉದಾಹರಣೆ, ಬ್ಯೂಟೈಲ್, ಈಥೈಲ್, ಮೀಥೈಲ್, ಪ್ರೋಪೈಲ್. 
ದ್ವಿಬಂಧ ಸಂಯುಕ್ತಗಳ ಅಂತ್ಯ ಈನ್ ಎಂದೂ ತ್ರಿಬಂಧ ಸಂಯುಕ್ತಗಳ ಅಂತ್ಯ ಐನ್ ಎಂದೂ ಇರಬೇಕು. ಮೂಲ ಆಲ್ಕೇನುಗಳ ಹೆಸರಿನಿಂದ ಆನ್ ಎಂಬ ಅಂತ್ಯವನ್ನು ತೆಗೆದ ಅನಂತರ ಉಳಿಯುವುದು. ದ್ವಿಬಂಧ ಅಥವಾ ತ್ರಿಬಂಧ ಸ್ಥಾನಗಳನ್ನು ಆ ಬಗೆಯ ಬಂಧಗಳನ್ನು ಪಡೆದಿರುವ ಇಂಗಾಲದ ಕ್ರಮಾಂಕದಿಂದ ತಿಳಿಸಬೇಕು. ಕ್ರಮಾಂಕಗಳನ್ನು ನಿರ್ದೇಶಿಸಲು ಆದೇಶಿತ ಪುಂಜಗಳ ಗಾತ್ರಗಳನ್ನು ಗಮನಿಸದೆ ಅಪರ್ಯಾಪ್ತ ಬಂಧವನ್ನೊಳಗೊಂಡಿರುವ ಅತಿ ದೀರ್ಘಸರಣಿಯನ್ನು ಆರಿಸಬೇಕು; ಮತ್ತು ಅಪರ್ಯಾಪ್ತ ಬಂಧದ ಸ್ಥಾನವನ್ನು ನಿರ್ದೇಶಿಸುವ ಕ್ರಮಾಂಕ ಕನಿಷ್ಠವಾಗಿರಬೇಕು. ಉದಾಹರಣೆ : 
     5      4       3      2
    ಅಊ3  -  ಅಊ2   -  ಅಊ2  -  ಅ — ಅಊ2 — ಅಊ2 — ಅಊ3
                  |I
                 1ಅಊ2
                                 2--ಪ್ರೋಪೈಲ್ --1---ಪೆಂಟೇನ್ 
  ಎರಡು ದ್ವಿಬಂಧಗಳುಳ್ಳ ಸಂಯುಕ್ತ — ಡಯೀನ್
  ಮೂರು ದ್ವಿಬಂಧಗಳುಳ್ಳ ಸಂಯುಕ್ತ — ಟ್ರಯೀನ್ 
  ಎರಡು ತ್ರಿಬಂಧಗಳುಳ್ಳ ಸಂಯುಕ್ತ - ಡೈಯೈನ್ 
  ಮೂರು ತ್ರಿಬಂಧಗಳುಳ್ಳ ಸಂಯುಕ್ತ - ಟ್ರಯೈನ್

ಆಲ್ಕೀನ್ ಮತ್ತು ಆಲ್ಕೈನ್ ನಿಷ್ಪನ್ನ (ಡೆರವಟ್ಯೂ) ಪುಂಜಗಳ ಹೆಸರುಗಳ ಮೂಲ ಸಂಯುಕ್ತದ ಹೆಸರಿಗೆ ಐಲ್ ಸೇರಿಸಿದಾಗ ದೊರೆಯುತ್ತವೆ. ಪುಂಜಗಳಲ್ಲಿ ಕ್ರಮಾಂಕಗಳನ್ನು ವೇಲೆನ್ಸಿಯಿರುವ ಇಂಗಾಲದಿಂದ ಆರಂಭಿಸಬೇಕು. ಉದಾಹರಣೆ : 
 2     1 
ಅಊ2=  ಅ----            1-ಮೀಥೈಲ್ ಎಥೀನೈಲ್ (ಸಾಮಾನ್ಯ ಹೆಸರು ---
    |              ಐಸೋ ಪ್ರೊಪೀನೈಲ್ ) 
    ಅಊ3
5    4    3   2   1  
 ಅಊ ಅ =  ಅಊ= ಅಊ—ಅಊ2    2--- ಪೆಂಟೇನ್--        4---ಯಿನೈಲ್ : 
ಹೈಡ್ರೊಕಾರ್ಬನ್ನುಗಳು-ಏಕಚಕ್ರೀಯ ಸಂಯುಕ್ತಗಳು : ಮಾತೃವೃತ್ತಗಳ ಮತ್ತು ಅವುಗಳ ನಿಷ್ಪನ್ನ ಪುಂಜಗಳ ಹೆಸರುಗಳನ್ನು ಪಡೆಯಲು ಅದೇ ಸಂಖ್ಯೆಯ ಇಂಗಾಲ ಪರಮಾಣುಗಳನ್ನುಳ್ಳ ಆಲ್ಕೇನುಗಳ ಹೆಸರುಗಳ ಹಿಂದೆ ಸೈಕ್ಲೋ ಸೇರಿಸಬೇಕು. ಉದಾಹರಣೆ : 

ಚಿತ್ರ-10

ವೃತ್ತಗಳಲ್ಲಿ ದ್ವಿಬಂಧ, ತ್ರಿಬಂಧಗಳಿದ್ದರೆ ಹೆಸರಿನಲ್ಲಿ ಏನ್ ಅಂತ್ಯದ ಬದಲು ಈನ್ ಅಥವಾ ಐನ್ ಅಂತ್ಯ ಸೇರುತ್ತದೆ. ಎರಡೂ ಇದ್ದರೆ ಕ್ರಮಾಂಕದಲ್ಲಿ ದ್ವಿಬಂಧದ ಕ್ರಮಾಂಕದಲ್ಲಿ ದ್ವಿಬಂಧದ ಕ್ರಮಾಂಕ ಕನಿಷ್ಠ ಉದಾಹರಣೆ : 

ಚಿತ್ರ-11

ಹೆಚ್ಚು ಅಪರ್ಯಾಪ್ತ ಬಂಧಗಳಿದ್ದರೆ ಈನ್, ಐನ್, ಡಯೀನ್ ಟ್ರಯೀನ್ ಮೊದಲಾದುವನ್ನು ಆಲಿಫ್ಯಾಟಿಕ್ ಅಥವಾ ಚಕ್ರೀಯ ಸಂಯುಕ್ತಗಳಲ್ಲಿ ಉಪಯೋಗಿಸುವಂತೆಯೇ ಉಪಯೋಗಿಸಲಾಗುತ್ತದೆ. 

ಏಕಚಕ್ರೀಯ ಆರೋಮ್ಯಾಟಿಕ್ ಸಂಯುಕ್ತಗಳಲ್ಲಿ ಮೊದಲನೆಯದಕ್ಕೆ ಬೆಂಜಿûೀನ್ ಎಂದು ಹೆಸರು. ಅನೇಕ ಆದೇಶಿತ ಬೆಂಜಿûೀನ್‍ಗಳಿಗೆ ಹಳೆಯ ಹೆಸರುಗಳೇ ಉಳಿಯುತ್ತವೆ. 
ಕೂಡಿಕೊಂಡಿರುವ ಬಹುಚಕ್ರೀಯ ಸಂಯುಕ್ತಗಳು ಅಥವಾ ವೃತ್ತಪುಂಜಗಳು ಮತ್ತು ಹೆಟಿರೊಸೈಕ್ಲಿಕ್ ಸಂಯುಕ್ತಗಳು : ಇವುಗಳಲ್ಲಿ ಮೊದಲಿನಿಂದ ಪರಿಚಿತವಿರುವ ವೃತ್ತಗಳಿಗೆ ಕ್ರಮಬದ್ಧವಾದ ಹೆಸರಿನ ಬದಲು ಹಳೆಯ ಹೆಸರುಗಳನ್ನೇ ಉಪಯೋಗಿಸಲಾಗುತ್ತದೆ. ಜಟಿಲ ಸಂಯುಕ್ತಗಳಿಗೂ ಕ್ರಮಬದ್ಧವಾದರೂ ಸುಲಭವಲ್ಲದ ಹೆಸರುಗಳಿಗಿಂತಲೂ ಸುಲಭವಾದ ಸಾಮಾನ್ಯ ಹೆಸರುಗಳನ್ನೇ ಉಪಯೋಗಿಸಬಹುದು. ಈ ರೀತಿಯ ಎಲ್ಲ ಬಗೆಯ ವೃತ್ತಗಳ ಹೆಸರುಗಳನ್ನೂ ರಿಂಗ್‍ಇಂಡೆಕ್ಸ್ ಎಂಬ ಪುಸ್ತಕದಿಂದ ಪಡೆಯಬಹುದು. ಇವುಗಳಲ್ಲಿ ಸ್ಥಾನಗಳ ಕ್ರಮಾಂಕಗಳನ್ನೂ ನಿರ್ದೇಶಿಸಲಾಗುತ್ತದೆ. ಹೊಸದಾಗಿ ಪರಿಚಿತವಾದ ಚಕ್ರೀಯ ಪುಂಜಗಳ ಕ್ರಮಬದ್ಧ ಹೆಸರಗಳೂ ಈ ಪುಸ್ತಕದಲ್ಲಿವೆ. 

ಕ್ರಿಯಾಪುಂಜಗಳು ಮತ್ತು ಅವುಗಳನ್ನುಳ್ಳ ಸಂಯುಕ್ತಗಳ ಹೆಸರುಗಳು : 
 -ಔ-      ಈಥರ್
    
-ಔಊ      ಆಲ್ಕೊಹಾಲ್; ಸಂಯುಕ್ತದ ಹೆಸರಿನ ಅಂತ್ಯ ಆಲ್

-ಓ<      ಆಮೈನ್ 
          
-ಅಊ=0    ಆಲ್ಡಿಹೈಡ್; ಸಂಯುಕ್ತದ ಹೆಸರಿನ ಅಂತ್ಯ ಆಲ್ 

 -ಅಔ-      ಕೀಟೋನ್ (ಆಕ್ಸೋ ಪುಂಜ)

-ಅಔಔಊ    ಆಮ್ಲ, ಕಾರ್ಬಾಕ್ಸಿಲಿಕ್ ಆಮ್ಲ
-ಅಔ-ಓ<  ಆಮೈಡ್, ಕಾರ್ಬಾಕ್ಸಮೈಡ್ 
-ಅಔಔಖ    ಎಸ್ಟರ್ 
 -ಅಔ-ಘಿ     ಆಮ್ಲ ಹ್ಯಾಲೈಡ್ 
     -ಘಿ      ಹ್ಯಾಲೈಡ್ 

ಕೇವಲ ಇಷ್ಟು ನಿಯಮಗಳ ಕಲೆಯುವಿಕೆಯಿಂದ ಎಲ್ಲ ಸಂಯುಕ್ತಗಳ ಹೆಸರುಗಳನ್ನೂ ಸರಿಯಾಗಿ ಹೇಳಲಾಗದು. ಅನೇಕ ಸಂಯುಕ್ತಗಳಿಗೆ ಹಳೆಯ ಹೆಸರುಗಳೇ ಬಹಳವಾಗಿ ಬಳಕೆಯಲ್ಲಿರುವುದರಿಂದ ಆ ಹೆಸರುಗಳನ್ನು ಹಳೆಯ ಹೆಸರುಗಳೆನ್ನುವುದಕ್ಕಿಂತಲೂ ಬಳಕೆಯ ಹೆಸರುಗಳೆನ್ನುವುದು ಸೂಕ್ತ. ಜಟಿಲ ಸಂಯುಕ್ತಗಳಿಗೆ ಹೆಸರಿಡುವಾಗ ಅವುಗಳ ಆಕರ, ಉಪಯುಕ್ತತೆ ಮೊದಲಾದುವನ್ನು ಆಧಾರವಾಗಿ ತೆಗೆದುಕೊಳ್ಳಬೇಕಾಗುತ್ತದೆ. 
ಇಂಗಾಲಸಂಯುಕ್ತಗಳ ವರ್ಗೀಕರಣ : ಇಂಗಾಲಸಂಯುಕ್ತಗಳಲ್ಲಿ ಅತಿ ಸರಳ ಸಂಯುಕ್ತಗಳೆಂದರೆ ಹೈಡ್ರೊಕಾರ್ಬನ್ನುಗಳು (ಜಲಜನಕೇಂಗಾಲ). ಇವು ಹೈಡ್ರೊಜನ್ ಮತ್ತು ಇಂಗಾಲ ಇವೆರಡೇ ಧಾತುಗಳು ಕೂಡಿ ಆಗಿವೆ. ಇವುಗಳಲ್ಲಿರುವ ಹೈಡ್ರೊಜನ್ನಿನ ಒಂದು ಅಥವಾ ಹೆಚ್ಚು ಪರಮಾಣುಗಳು ಇತರ ಬಗೆಯ ಪುಂಜಗಳಿಂದ ಆದೇಶಿತವಾಗಿ ಇತರ ಬಗೆಯ ಇಂಗಾಲಸಂಯುಕ್ತಗಳ ಸೃಷ್ಟಿಯಾಗಿದೆಯೆಂದು ಭಾವಿಸಬಹುದು. ಈ ಬಗೆಯ ಹೊಸ ಸಂಯುಕ್ತಗಳ ರಾಸಾಯನಿಕ ಗುಣಲಕ್ಷಣಗಳು ಈ ಆದೇಶಿತ ಪುಂಜಗಳನ್ನು ಅವಲಂಬಿಸಿವೆ. ಈ ಸಂಯುಕ್ತಗಳು ಭಾಗವಹಿಸುವ ಕ್ರಿಯೆಗಳಿಗೆ ಅನುಗುಣವಾಗಿ ಸಂಯುಕ್ತಗಳನ್ನು ವರ್ಗೀಕರಿಸಲಾಗುವುದರಿಂದ ಈ ಲಕ್ಷಣಕಾರಣ ಪುಂಜಗಳನ್ನು ಕ್ರಿಯಾಪುಂಜಗಳೆಂದು ಕರೆಯಲಾಗುತ್ತದೆ. ಮೊದಲ ಬಗೆಯ ವರ್ಗೀಕರಣ ಅಣುಗಳ ಆಕಾರಗಳನ್ನು ಅವಲಂಬಿಸಿದೆ. ಆಕಾರಗಳೂ ಸಂಯುಕ್ತಗಳ ಲಕ್ಷಣಗಳ ಮೇಲೆ ಪ್ರಭಾವ ಬೀರುವುದರಿಂದ ಈ ಬಗೆಯ ವರ್ಗೀಕರಣ ಸಂಯುಕ್ತಗಳ ಅಭ್ಯಾಸಕ್ಕೆ ಅನುಕೂಲವಾಗಿದೆ. 

(ನೋಡಿ- ಆರೋಮ್ಯಾಟಿಕ್-ಸಂಯುಕ್ತಗಳು)
(ನೋಡಿ- ಆಲಿಫ್ಯಾಟಿಕ್-ಸಂಯುಕ್ತಗಳು)
(ನೋಡಿ- ಆಲಿಸೈಕ್ಲಿಕ್-ಸಂಯುಕ್ತಗಳು)

ಹೆಟಿರೋಸೈಕ್ಲಿಕ್ ಸಂಯುಕ್ತಗಳು : ಹೆಸರಿನಿಂದಲೇ ವ್ಯಕ್ತವಾಗುವಂತೆ ಈ ಸಂಯುಕ್ತಗಳು ಚಕ್ರೀಯ ಸಂಯುಕ್ತಗಳು. ಇದುವರೆಗೆ ವಿವರಿಸಿದ ಚಕ್ರೀಯ ಸಂಯುಕ್ತಗಳಿಗೂ ಇವುಗಳಿಗೂ ಇರುವ ವ್ಯತ್ಯಾಸವೆಂದರೆ ಈ ಸಂಯುಕ್ತಗಳು ವೃತ್ತ ನಿರ್ಮಾಣದಲ್ಲಿ ಪಾಲುಗೊಂಡಿರುವ ಪರಮಾಣುಗಳೆಲ್ಲ ಇಂಗಾಲಗಳಲ್ಲ. ಚಕ್ರದ ಒಂದು ಅಥವಾ ಅನೇಕ ಪರಮಾಣುಗಳು ಇತರ ಧಾತುಗಳ ಪರಮಾಣುಗಳು. ನೈಟ್ರೊಜನ್, ಆಕ್ಸಿಜನ್, ಸಲ್ಫರುಗಳು ಸಾಮಾನ್ಯವಾಗಿ ಹೆಟಿರೊಸೈಕ್ಲಿಕ್ ಚಕ್ರಗಳಲ್ಲಿರುವ ಇತರ ಪರಮಾಣುಗಳು. ಇತರ ಚಕ್ರೀಯ ಸಂಯುಕ್ತಗಳಂತೆಯೇ ಈ ಬಗೆಯ ಸಂಯುಕ್ತಗಳಲ್ಲಿಯೂ ಐದು ಅಥವಾ ಆರು ಪರಮಾಣುಗಳನ್ನುಳ್ಳ ಚಕ್ರಗಳೇ ಹೆಚ್ಚುಮಟ್ಟಿಗೆ ಕಾಣಸಿಗುತ್ತವೆ. ಹಲವು ಮುಖ್ಯ ಮತ್ತು ಸಾಮಾನ್ಯ ಹೆಟಿರೊಸೈಕ್ಲಿಕ್ ಸಂಯುಕ್ತಗಳ ರಚನಾಸೂತ್ರಗಳನ್ನು ಕೆಳಗೆ ಕೊಡಲಾಗಿದೆ. 

ಚಿತ್ರದಲ್ಲಿ ತೋರಿಸಿರುವ ಸಂಯುಕ್ತಗಳೆಲ್ಲವೂ ಆರೊಮ್ಯಾಟಿಕ್ ಸಂಯುಕ್ತಗಳಾಗಿದ್ದರೂ ಹೆಟಿರೊಸೈಕ್ಲಿಕ್ ಸಂಯುಕ್ತ ಆರೊಮ್ಯಾಟಿಕ್ ಸಂಯುಕ್ತವಾಗಿ ಇರಬೇಕಾದ ಆವಶ್ಯಕತೆಯೇನೂ ಇಲ್ಲ. ಚಕ್ರಕ್ಕೆ ಸೇರಿದ ಹೈಡ್ರೊಜನ್ನನ್ನು ಕ್ರಿಯಾಪುಂಜದಿಂದ ಆದೇಶಿಸಿದಾಗ ಕ್ರಿಯಾಪುಂಜಗಳನ್ನುಳ್ಳ ಹೆಟಿರೋಸೈಕ್ಲಿಕ್ ಸಂಯುಕ್ತಗಳು ದೊರೆಯುತ್ತವೆ. 

ಚಿತ್ರ-12

ಹೆಟೆರೊಸೈಕ್ಲಿಕ್ ಚಕ್ರಗಳು ಅನೇಕ ಪ್ರಕೃತಿದತ್ತ ಜಟಿಲ ಇಂಗಾಲ ಸಂಯುಕ್ತಗಳಲ್ಲಿವೆ. ಉದಾಹರಣೆಗೆ ಕ್ಲೊರೋಫಿಲ್ ಮತ್ತು ಬಿ-12 ಜೀವಾತುವಿನಲ್ಲಿ ಪಿರೋಲ್ ವೃತ್ತಗಳಿವೆ. ಇಂಡಿಗೋ ವರ್ಣದ್ರವ್ಯದಲ್ಲಿ ಇಂಡೋಲ್ ಎಂಬ ಹೆಟಿರೋಸೈಕ್ಲಿಕ್ ವೃತ್ತ (ರಿಂಗ್) ರಚನೆಯಿದೆ. ಅನೇಕ ಆಲ್ಕಲಾಯ್ಡುಗಳಲ್ಲಿ ಪಿರೋಲ್, ಪಿಂಡಿನ್, ಕ್ವಿನೋಲಿನ್ ಮತ್ತು ಐಸೋ ಕ್ವಿನೋಲಿನ್ ವೃತ್ತರಚನೆಗಳಿವೆ. ಅದ್ದರಿಂದ ಪ್ರಕೃತಿಯಲ್ಲಿ ದೊರೆಯುವ ಅನೇಕ ಇಂಗಾಲ ಸಂಯುಕ್ತಗಳು ಮತ್ತು ಅದರ ಸಂಬಂಧಿಗಳ ಸಂಶ್ಲೇಷಣೆಗಳಲ್ಲಿ ಹೆಟೆರೊಸೈಕ್ಲಿಕ್ ಸಂಯುಕ್ತಗಳನ್ನು ಆರಂಭವಸ್ತುಗಳಾಗಿ ಉಪಯೋಗಿಸಲಾಗುತ್ತದೆ. ಅನೇಕ ಹೆಟೆರೊಸೈಕ್ಲಿಕ್ ಸಂಯುಕ್ತಗಳು ಪ್ರಕೃತಿಯಲ್ಲಿ ದೊರೆಯುವುವು ಮಾತ್ರವಲ್ಲದೆ ಅಸಂಖ್ಯಾತ ಸಂಯುಕ್ತಗಳನ್ನು ಪ್ರಯೋಗಶಾಲೆಯಲ್ಲಿ ಕೃತಕವಾಗಿ ಸಂಶ್ಲೇಷಿಸಲಾಗಿದೆ. 

ಜಟಿಲ ಸಂಯುಕ್ತಗಳು : ಇವನ್ನು ಮೇಲೆ ತಿಳಿಸಿದ ಯಾವೊಂದು ವರ್ಗಕ್ಕೂ ಸೇರಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಅನೇಕ ಕ್ರಿಯಾಪುಂಜಗಳನ್ನು ಪಡೆದಿರುವುದರಿಂದ ಕ್ರಿಯಾಪುಂಜಕ್ಕನುಗುಣವಾಗಿ ಮಾಡಿದ ವರ್ಗೀಕರಣದಲ್ಲೂ ಸೇರಿಸುವಂತಿಲ್ಲ. ಈ ಸಂಯುಕ್ತಗಳ ಪ್ರತ್ಯೇಕ ವರ್ಗೀಕರಣ ವಿಧಾನಕ್ಕೆ ಆಕರ ಸಾಮ್ಯ, ರಚನಾಸಾಮ್ಯ ಅಥವಾ ಉಪಯುಕ್ತತಾಸಾಮ್ಯಗಳು ಆಧಾರಗಳು.

ಪ್ರಕೃತಿದತ್ತ ಜಟಿಲ ಸಂಯುಕ್ತಗಳಲ್ಲಿ ಮುಖ್ಯವಾದ ಗುಂಪುಗಳು ಪ್ರೋಟೀನ್ ಮತ್ತು ಪಾಲಿಪೆಪ್ಟೈಡುಗಳು, ಶರ್ಕರಪಿಷ್ಟಗಳು (ಕಾರ್ಬೊಹೈಡ್ರೇಟುಗಳು) ತೈಲ ಮತ್ತು ಕೊಬ್ಬುಗಳು (ಆಯ್ಲ್ಸ್ ಅಂಡ್ ಫ್ಯಾಟ್ಸ್), ಆಲ್ಕಲಾಯ್ಡುಗಳು, ಜೀವಾತುಗಳು (ವಿಟಮಿನ್ಸ್), ಸ್ಟೆರಾಯ್ಡುಗಳು, ಹಾರ್ಮೋನುಗಳು, ಅಷ್ಟೇ ಅಲ್ಲದೆ ಅನೇಕ ಔಷಧ ದ್ರವ್ಯಗಳು ಮತ್ತು ವರ್ಣದ್ರವ್ಯಗಳೂ ಪ್ರಕೃತಿಯಲ್ಲಿ ದೊರೆಯುತ್ತವೆ. 

ಕೃತಕ ಜಟಿಲ ಇಂಗಾಲ ಸಂಯುಕ್ತಗಳಲ್ಲಿ ಮುಖ್ಯವಾದವು ಕೃತಕ ಔಷಧ ದ್ರವ್ಯಗಳು ಮತ್ತು ಬಹ್ವಂಗಗಳು (ಪಾಲಿಮರುಗಳು). ಕೃತಕ ಎಳೆ, ಕೃತಕ ರಬ್ಬರ್, ಪ್ಲಾಸ್ಟಿಕ್ ಮೊದಲಾದುವುಗಳೆಲ್ಲ ಬಹ್ವಂಗಗಳು. 

ಕ್ರಿಯಾಪುಂಜಗಳಾವುವೂ ಇಲ್ಲದ ಹೈಡ್ರೊಕಾರ್ಬನ್ನುಗಳು ಮೊದಲನೆಯವು. ಅವುಗಳ ನಿಷ್ಪನ್ನಗಳೆಂದು ಪರಿಗಣಿಸಬಹುದಾದ ಇತರ ಸಂಯುಕ್ತಗಳನ್ನು ಕ್ರಿಯಾಪುಂಜಗಳಿಗನುಗುಣವಾಗಿ ವರ್ಗೀಕರಿಸಲಾಗುತ್ತದೆ. 

ಹೈಡ್ರೊಕಾರ್ಬನ್ನುಗಳು : ಇವು ಆಲಿಫ್ಯಾಟಿಕ್, ಆಲಿಸೈಕ್ಲಿಕ್ ಅಥವಾ ಆರೊಮ್ಯಾಟಿಕ್ ವರ್ಗಗಳಿಗೆ ಸೇರಿರಬಹುದು. ಆಲಿಫ್ಯಾಟಿಕ್ ಅಥವಾ ಆಲಿಸೈಕ್ಲಿಕ್ ಸಂಯುಕ್ತಗಳಾಗಿರುವಾಗ ದ್ವಿಬಂಧ, ತ್ರಿಬಂಧಗಳನ್ನೊಡಗೊಂಡು ಅಪರ್ಯಾಪ್ತ (ಅನ್‍ಸ್ಯಾಚುರೇಟಡ್) ಸಂಯುಕ್ತಗಳಾಗಿರಬಹುದು. ಅಥವಾ ಏಕಬಂಧಗಳನ್ನು ಮಾತ್ರ ಒಳಗೊಂಡ ಪರ್ಯಾಪ್ತ ಸಂಯುಕ್ತಗಳಾಗಿರಬಹುದು. ಆರೊಮ್ಯಾಟಿಕ್ ಸಂಯುಕ್ತಗಳು ಒಂದು ವಿಶಿಷ್ಟ ರೀತಿಯ ಅಪರ್ಯಾಪ್ತ ಸಂಯುಕ್ತಗಳು. ಪರ್ಯಾಪ್ತ ಸಂಯುಕ್ತಗಳು ಆಲ್ಕೇನ್ ಅಥವಾ ಸೈಕ್ಲೋಆಲ್ಕೇನುಗಳೆನ್ನಿಸಿಕೊಳ್ಳುತ್ತವೆ. ದ್ವಿಬಂಧವುಳ್ಳವು (ಆರೊಮ್ಯಾಟಿಕ್ ಸಂಯುಕ್ತಗಳನ್ನು ಬಿಟ್ಟು) ಆಲ್ಕೇನುಗಳು ಅಥವಾ ಸೈಕ್ಲೋಆಲ್ಕೇನುಗಳು ಮತ್ತು ತ್ರಿಬಂಧವುಳ್ಳ ಸಂಯುಕ್ತಗಳು ಆಲ್ಕೈನುಗಳು. 

	ಎಲ್ಲ ಬಗೆಯ ಹೈಡ್ರೊಕಾರ್ಬನ್‍ಗಳೂ ಪ್ರಕೃತಿಯಲ್ಲಿ ಪೆಟ್ರೋಲಿಯಂ ಎಣ್ಣೆಯಲ್ಲಿ ದೊರೆಯುತ್ತವೆ. ಆರೋಮ್ಯಾಟಿಕ್ ಸಂಯುಕ್ತಗಳು ತಕ್ಕಮಟ್ಟಿನ ಪ್ರಮಾಣದಲ್ಲಿ ಕಲ್ಲಿದ್ದಲಿನಲ್ಲಿಯೂ ದೊರೆಯುತ್ತವೆ.

	ಬಹು ದ್ವಿಬಂಧಗಳನ್ನುಳ್ಳ ಆನೇಕ ಸಂಯುಕ್ತಗಳು ಸ್ಕ್ವಾಲೀನ್, ಅಲ್ಲೀನ್, ಬ್ಯೂಟಡಯೀನ್, 2, 3 - ಡೈಮೀಥೈಲ್ ಬ್ಯೂಟಡಯೀನ್, ಐಸೋಪ್ರೀನ್, ಕ್ಲೋರೋಪ್ರೀನ್ ಮೊದಲಾದವು - ಇಂಗಾಲಸಂಯುಕ್ತ ರಸಾಯನಶಾಸ್ತ್ರದಲ್ಲಿ ಹಲವು ಪ್ರಮುಖ ಸಂಯುಕ್ತಗಳು. 
ತ್ರ್ರಿಬಂಧವುಳ್ಳ ಆಲಿಫ್ಯಾಟಿಕ್ ಸಂಯುಕ್ತಗಳು ಅಸಿಟಲೀನ್ ಅಥವಾ ಅಲ್ಕೈನ್‍ಗಳು. ಪ್ರಕೃತಿಯಲ್ಲ್ಲಿ ಅಲ್ಲಲ್ಲಿ ತ್ರಿಬಂಧಪೂರಿತ ಸಂಯುಕ್ತಗಳು ದೊರೆಯುವುವಾದರೂ ಅವು ಬಲು ಒರಳ. ಸಾಮಾನ್ಯವಾಗಿ ಇವನ್ನು ಕೃತಕವಾಗಿ ಸಂಯೋಜಿಸಲಾಗುತ್ತದೆ. ಅತಿ ಸರಳ ಅಲ್ಕೈನ್ ಗುಂಪಿನ ಹೈಡ್ರೊಕಾರ್ಬನ್ ಆದ ಅಸಿಟಲೀನನ್ನು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ವರ್ತನೆಯಿಂದ ಪಡೆಯಬಹುದು. ದ್ವಿಬಂಧ ಸಂಯುಕ್ತಗಳಿಂದ ತ್ರಿಬಂಧ ಸಂಯುಕ್ತಗಳನ್ನು ತಯಾರಿಸಬಹುದು. ತ್ರಿಬಂಧ ಸಂಯುಕ್ತಗಳು ದ್ವಿಬಂಧ ಸಂಯುಕ್ತಗಳಿಗಿಂತಲೂ ಬಲು ಅಸ್ದಿರ ಅಥವಾ ಪಟು. ಅಲ್ಕೀನುಗಳಂತೆಯೇ ಆಲ್ಕೈನುಗಳೂ ಸಂಕಲನ ಕ್ರಿಯೆಗಳಲ್ಲಿ ಭಾಗವಹಿಸಬಲ್ಲವು. ತ್ರಿಬಂಧ ಇಂಗಾಲಕ್ಕೆ ಸೇರಿದ ಹೈಡ್ರೊಜನ್ ಪರಮಾಣು ಬಲು ಪಟು. ಇದನ್ನು ಸುಲಭವಾಗಿ ಸೋಡಿಯಂನಂಥ ಪಟುಗಳೆಂಬ ಆಗ್ರ್ಯಾನೋಲೋಹಸಂಯುಕ್ತಗಳು ಆನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಬಲು ಉಪಯುಕ್ತ ಮಧ್ಯವರ್ತಿಗಳು.
	
ಹ್ಯಾಲೈಡುಗಳು; ಯಾವುದೇ ಬಗೆಯ ಹೈಡ್ರೊಕಾರ್ಬನ್ನಿನಲ್ಲಿನ ಹೈಡ್ರೊಜನ್ನನ್ನು ಹ್ಯಾಲೊಜನ್ ಪರಮಾಣುವಿನಿಂದ ಆದೇಶಿಸಿದಾಗ ಹ್ಯಾಲೈಡ್ ದೊರೆಯುವುದು ಒಂದಕ್ಕಿಂತ ಹೆಚ್ಚು ಹೈಡ್ರೊಜನ್ ಪರಮಾಣುಗಳನ್ನೂ ಆದೇಶಿಸಲು ಸಾಧ್ಯ. ಹೈಡ್ರೊಜನ್ನನ್ನು ನೇರವಾಗಿ ಆದೇಶಿಸಲು ಎಲ್ಲ ಸಂದರ್ಭಗಳಲ್ಲಿಯೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಆಲ್ಕೊಹಾಲುಗಳಲ್ಲಿನ ಹೈಡ್ರಾಕ್ಸಿಲ್ ಪುಂಜದ ಆದೇಶದಿಂದ ಹ್ಯಾಲೈಡುಗಳನ್ನು ತಯಾರಿಸಲಾಗುತ್ತದೆ. ಹ್ಯಾಲೈಡುಗಳು ಪಟು ಸಂಯುಕ್ತಗಳಾದ್ದರಿಂದ ಆನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಗ್ರೀನಾರ್ಡ್ ಸಂಯುಕ್ತಗಳೆಂಬ ಬಲುಮುಖ್ಯ ಆಗ್ರ್ಯಾನೋಲೋಹ ಸಂಯುಕ್ತಗಳ ತಯಾರಿಕೆಗೆ ಹ್ಯಾಲೈಡುಗಳೇ ಮೂಲವಸ್ತುಗಳು. ಅಪರ್ಯಾಪ್ತ ಆಲ್ಕೈಲ್ ಹ್ಯಾಲೈಡ್ ಆದ ವೀನೈಲ್ ಕ್ಲೋರೇಡನ್ನು ಪ್ಲಾಸ್ಟಿಕುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಕ್ಲೋರೋಫಾರಂ ಮೀಥೇನಿನ ಟ್ರೈ ಹ್ಯಾಲೈಡ್. (ನೋಡಿ- ಆಲ್ಕೊಹಾಲ್)
ಈಥರುಗಳು: ಆಲ್ಕೊಹಾಲಿನಲ್ಲಿನ ಹೈಡ್ರಾಕ್ಸಿಲ್ ಪುಂಜದ ಹೈಡ್ರೊಜನ್ನನ್ನು ಆಲ್ಕೈಲ್, ಅರೈಲ ಅಥವಾ ಸೈಕ್ಲೋಆಲ್ಕೈಲ್ ಪುಂಜವೊಂದರಿಂದ ಆದೇಶಿಸಿದಾಗ ದೊರೆಯುವುದು ಈಥರ್. ಇವನ್ನು ತಯಾರಿಸಲು ಆಲ್ಕೊಹಾಲುಗಳೇ ಮೂಲವಸ್ತುಗಳು. ಈಥರುಗಳು ಸ್ವಲ್ಪ ಹೆಚ್ಚು ಕಡಿಮೆ ಆಲ್ಕೇನುಗಳಷ್ಟೇ ಜಡವಸ್ತುಗಳು. ಸಾಮಾನ್ಯವಾಗಿ ಈಥರುಗಳು ಭಾಗವಹಿಸುವ ಎಲ್ಲ ಕ್ರಿಯೆಗಳಲ್ಲೂ ಈಥರ್ ಬಂಧನದ ಛೇದವಾಗುತ್ತದೆ. ತೀವ್ರ ಉತ್ಕರ್ಷಣ ಪರಿಸ್ಥಿತಿಗಳಲ್ಲಿ ಅಣುಛೇದಗೊಂಡು ಈಥರುಗಳು ಅಲ್ಡಿಹೈಗಳನ್ನು ನೀಡುತ್ತವೆ. ಆಕ್ಸಿಜನ್ ಸಂಪರ್ಕದಲ್ಲಿ ಈಥರುಗಳು ಸ್ಪೋಟಕ ಪೆರುರಾಕ್ಸೈಡುಗಳಾಗಿ ಮಾರ್ಪಡುತ್ತವೆ. ಆದ್ದರಿಂದ ಈಥರುಗಳ ತಯಾರಿಕೆ ಮತ್ತು ಶುದ್ಧೀಕರಣಗಳಲ್ಲಿ ಜಾಗರೂಕತೆ ಅವಶ್ಯಕ. ಸಾಮಾನ್ಯವಾಗಿ ಕೇವಲ ಈಥರ್ ಎಂದೆನಿಸಿಕೊಳ್ಳುವ ಸಂಯುಕ್ತ ಡೈಈಥೈಲ್ ಈಥರ್ (ಅ2ಊ5 — ಔ — ಅ2ಊ5). ಎಥಿಲೀನ್ ಅಥವಾ ಎಥನಾಲಿನಿಂದ ಇದನ್ನು ತಯಾರಿಸಬಹುದು. ಇದರ ಮುಖ್ಯ ಉಪಯೋಗಗಳು ವೇದನಾ ಪ್ರತಿಬಂಧಕವಾಗಿ ಮತ್ತು ಸಾರ್ವತ್ರಿಕಲೀನಕಾರಿಯಾಗಿ.

 (ನೋಡಿ- ಆಲ್ಡಿಹೈಡುಗಳು)
	ಆಮ್ಲಗಳು ಮತ್ತು ಅವುಗಳ ನಿಪ್ಪನ್ನಗಳು: ಕಾರ್ಬಾಕ್ಸಿಲ್ (ಅಔಔಊ) ಪುಂಜವನ್ನುಳ್ಳ ಇಂಗಾಲ ಸಂಯುಕ್ತಗಳು ಆಮ್ಲಗಳೆಂದೆನ್ನಿಸಿಕೊಳ್ಳುತ್ತವೆ. ಕಾರ್ಬಾಕ್ಸಿಲ್ ಹೈಡ್ರೊಜನ್ನಿಗೆ ಸುಲಭವಾಗಿ ಬಿಡುಗಡೆಯಾಗುವ ಶಕ್ತಿಯಿದ್ದು ಆಮ್ಲಗಳು ಕ್ಷಾರ ವಸ್ತುಗಳೊಡನೆ ವರ್ತಿಸಿದಾಗ ಈ ಹೈಡ್ರೊಜನ್ ಆದೇಶಗೊಂಡು ಲವಣಗಳು ಕ್ರಿಯಾ ಉತ್ಪನ್ನವಾಗಿ ದೊರೆಯುತ್ತವೆ. ಆದರೆ ಈ ಆಮ್ಲಗಳು ಖನಿಜ ಆಮ್ಲಗಳಿಗಿಂತಲೂ ದುರ್ಬಲವಾದುವುಗಳಾದ್ದರಿಂದ ಈ ಬಗೆಯ ಲವಣಗಳು ಖನಿಜ ಆಮ್ಲಗಳಿಂದ ವಿಭಜನೆಗೊಳ್ಳುತ್ತವೆ. ಅಣುಗಾತ್ರ ಹೆಚ್ಚಿದಂತೆ ಆಮ್ಲೀಯತೆ ಕಡಿಮೆಯಾಗುತ್ತದೆ. ಹಿರಿಯ ಗಾತ್ರದ ಆಮ್ಲಗಳು ಎಣ್ಣೆ, ಕೊಬ್ಬುಗಳಲ್ಲಿ ಎಸ್ಟರುಗಳ ರೂಪದಲ್ಲಿರುತ್ತವೆ. ಬಹುಸಂಖ್ಯೆಯ ಕಾರ್ಬಾಕ್ಸಿಲ್ ಪುಂಜಗಳನ್ನುಳ್ಳ ಆಮ್ಲಗಳೂ ಉಂಟು. ಆಮ್ಲ್ಲಗಳು ಆಲ್ಕೊಹಾಲುಗಳೊಡನೆ ವರ್ತಿಸಿದಾಗ ದೊರೆಯುವ ನಿಪ್ಪನ್ನಗಳೇ ಎಸ್ಟರುಗಳು.
[ಊ+]

ಖ-ಅಔಔಊ+ಖಔಊ----->ಖ-ಅಔಔಖ+ಊ2ಔ
ಪ್ರಕೃತಿಯಲ್ಲಿ ದೊರೆಯುವ ಆನೇಕ ಸುಗಂಧದ್ರವ್ಯ, ಮಧುರ ದ್ರವ್ಯಗಳಲ್ಲಿ ಎಸ್ಟರುಗಳಿವೆ.

	ಆಮ್ಲ್ಲಗಳು ಅಮೋನಿಯ ಅಥವಾ ಆಮೈಡುಗಳೊಡನೆ ವಿಶಷ್ಟ ರೀತಿಯಲ್ಲಿ ವರ್ತಿಸಿದಾಗ ದೊರೆಯುವುದು ಆಮೈಡುಗಳು.
ಖ-ಅಔಔಊ+ಖಓ ಊ2----->ಖಅಔಓಊಖ+ಊ2ಔ
ಆಮೈಡುಗಳು ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಸಂಯುಕ್ತಗಳ ಸಂಯೋಗದಿಂದ ಆದ ಸಂಯುಕ್ತಗಳಾದ್ದರಿಂದ ಅವು ಬಲುಮಟ್ಟಿಗೆ ಲವಣಸದೃಶ ತಟಸ್ಥ ಅಥವಾ ಪ್ರತ್ಯಾಮ್ಲೀಯ (ಆಂಫೊಟೆರಿಕ್) ಸಂಯುಕ್ತಗಳು. ಖನಿಜ ಆಮ್ಲಗಳೊಡನೆ ಇವು ವರ್ತಿಸಿದಾಗ ವಿಭಜನೆಗೊಂಡು ಆಮ್ಲ ಮತ್ತು ಅಮೈನುಗಳ ಬಿಡುಗೆಯಾಗುತ್ತದೆ. ಪ್ರೋಟೀನುಗಳು ಆಮೈಡುಗಳ ಸರಣಿಗಳಿಂದ ಆದವು. ರೇಷ್ಮೆ ಮತ್ತು ನೈಲಾನ್ ಎಳೆಗಳೂ ಆಮೈಡ್ ಸರಣಿಗಳು.

	ಆಧುನಿಕ ಇಂಗಾಲ ಸಂಯುಕ್ತ ರಸಾಯನಶಾಸ್ತ್ರ ಅಧ್ಯಯನ; ಹೊಸ ಇಂಗಾಲ ಸಂಯುಕ್ತಗಳ ಪ್ರಕೃತಿಯ ಆಕರಗಳಿಂದ ಬೇರ್ಪಡಿಸಿ ತೆಗೆದು ಶುದ್ಧರೂಪದಲ್ಲಿ ಪಡೆಯುವುದು: ಅವುಗಳ ಸಂಪೂರ್ಣರಚನಾನಿರ್ಣಯ ಮಾಡುವುದು; ಬೇರ್ಪಡಿಸಿದ ಸಂಯುಕ್ತಗಳನ್ನು ಮತ್ತು ಅವುಗಳ ಸಂಬಂಧಿ ಸಂಯುಕ್ತಗಳನ್ನು ಕೃತಕವಾಗಿ ಪ್ರಯೋಗಶಾಲೆಗಳಲ್ಲಿ ಸಂಯೋಜಿಸುವುದು; ಪ್ರಕೃತಿಯಲ್ಲಿ ಸಹಜ ಸಂಯುಕ್ತಗಳು ಸಂಶ್ಲೇಷಣೆ ಹೇಗೆ ಆಗಿದೆಯೆಂದು ಪರಿಶೀಲಿಸುವುದು; ಮತ್ತು ಸಹಜ ಹಾಗೂ ಕೃತಕ ಸಂಯುಕ್ತಗಳ ಉಪಯುಕ್ತತೆಯನ್ನು ಪರಿಶೀಲಿಸುವುದು-ಇವಿಷ್ಟು ಒಬ್ಬ ರಸಾಯನಶಾಸ್ತ್ರಜ್ಞನ ಮೊದಲ ಕರ್ತವ್ಯ. ಇಂಥ ಸಂಶೋಧನೆಗಳಿಂದ ಪ್ರಕೃತಿಯ ರಾಸಾಯನಿಕರಹಸ್ಯಗಳನ್ನು ಅರಿಯಬಹುದು; ಪ್ರಕೃತಿದತ್ತ ಸಂಯುಕ್ತಗಳ ಉಪಯುಕ್ತತೆಗಳನ್ನು ತಿಳಿಯಬಹುದು.
	ಎರಡನೆಯ ಕರ್ತವ್ಯ ಅಣುಗಳ ರಚನೆಯ ಬಗ್ಗೆ ರಾಸಾಯನಿಕ ಕ್ರಿಯಾ ರಹಸ್ಯಗಳು. ಕ್ರಿಯಾವೇಗಶಾಸ್ತ್ರ (ಆಕ್ಷನ್ ಕೈನೆಟಿಕ್ಸ್) ಮತ್ತು ಕ್ರಿಯೆಗಳು ನಡಯಲು ಬೇಕಾಗುವ ಅತಿಸೂಕ್ತ ಪರಿಸ್ಥಿತಿಗಳ ಬಗ್ಗೆ ಸಂಶೋಧನೆ. ಈ ಅಧ್ಯಯನದ ಹೆಸರು ಇಂಗಾಲಸಂಯುಕ್ತ ಭೌತರಸಾಯನಶಾಸ್ತ್ರ.

	ಮೂರನೆಯ ಕರ್ತವ್ಯ ಭೌತ ವಿಧಾನಗಳನ್ನು ಇಂಗಾಲ ಸಂಯುಕ್ತಗಳ ಅಧ್ಯಯನಕ್ಕೆ ಅಳವಡಿಸುವುದು. ಈ ಶತಮಾನದಲ್ಲಿ ಈ ಬಗೆಯ ಸಂಶೋಧನೆಗಳಲ್ಲಿ ಅಗಾಧಕಾರ್ಯ ನಡೆದಿದ್ದು ಬಲು ಸೂಕ್ಷ್ಮ ಮತ್ತು ನಿಖರ ಭೌತ ಉಪಕರಣಗಳಿಲ್ಲದೆ ಇಂದಿನ ಇಂಗಾಲಸಂಯುಕ್ತರಸಾಯನಶಾಸ್ತ್ರದ ಸಂಶೋಧನೆಗಳು ನಡೆಯುವಂತೆಯೇ ಇಲ್ಲವೆನ್ನಬಹುದು. ಅಣುರಚನೆಯ ಅತಿಸೂಕ್ಷ್ಮ ವಿವರಗಳು ಅಣುಗಳ ಆಕಾರಗಳು, ಅತಿವೇಗದಲ್ಲಿ ನಡೆಯುವ ಕ್ರಿಯೆಗಳ ರಹಸ್ಯಗಳು, ಅತ್ಯಲ್ಪ ಆಯುಸ್ಸುಳ್ಳ ಕ್ರಿಯಾಮಧ್ಯವರ್ತಿಗಳ ಸ್ವರೂಪಗಳು ಮೊದಲಾದುವನ್ನು ಅರಿತುಕೊಳ್ಳುವ ರಂಗದಲ್ಲಿ ಈಗ ನಮ್ಮ ನೆರವಿಗಿರುವ ವಿವಿzs ರೀತಿಯ ರೋಹಿತ ವಿಧಾನಗಳು, ನಮನ ವಿಧಾನಗಳು, ಗಣಕಯಂತ್ರಗಳೇ ಮೊದಲಾದ ಭೌತ ವಿಧಾನಗಳು ಮತ್ತು ಸೂಕ್ಷ್ಮ ಉಪಕರಣಗಳ ನೆರವಿಲ್ಲದೆ ಈಗ ಸಾಧಿಸಿರುವ ಅನೇಕ ಸಾಧನಗಳು ಸಾಧ್ಯವೇ ಆಗುತ್ತ್ತಿರಲಿಲ್ಲ.

	ನಾಲ್ಕನೆಯ ಬಗೆಯ ಅಧ್ಯಯನದ ಹೆಸರು ಔದ್ಯಮಿಕ ಇಂಗಾಲಸಂಯುಕ್ತ ರಸಾಯನಶಾಸ್ತ್ರ. ಮೇಲೆ ಹೇಳಿದ ಮೂರು ಬಗೆಯ ಅಧ್ಯಯನಗಳನ್ನೂ ಇಲ್ಲಿ ಉಪಯೋಗಿಸಿಕೊಂಡು ಜನರ ಉಪಯೋಗಕ್ಕೆ ಬೇಕಾಗುವ ಸಂಯುಕ್ತಗಳನ್ನು ಬೇಕಾದಷ್ಟು ಹಿರಿಯ ಪ್ರಮಾಣದಲ್ಲಿ ಒದಗಿಸಲು ಪ್ರಯತ್ನಿಸಲಾಗುವುದು.

	ನಿತ್ಯ ಜೀವನದಲ್ಲಿ ಇಂಗಾಲ ಸಂಯುಕ್ತಗಳು: ಅಧಿಕ ಸಂಖ್ಯೆಯ ಜೀವಜನ್ಯ ಸಂಯುಕ್ತಗಳು ಇಂಗಾಲ ಸಂಯುಕ್ತಗಳಾದ್ದರಿಂದ ನಾವು ಹೆಜ್ಜೆ ಹೆಜ್ಜೆಗೂ ಅವನ್ನು ಕಾಣುವುದು ಮತ್ತು ಉಪಯೋಗಿಸುವುದು ಅನಿವಾರ್ಯವೇ ಆಗಿದೆ. ಕೂಲಂಕಷ ಪರಿಶೀಲನೆಯ ಪರಿಣಾಮವಾಗಿ ಜೀವನದ ಇರುವಿಕೆಗೇ ಕಾರಣವಾದ ಇಂಗಾಲ ಸಂಯುಕ್ತಗಳ ವಿಷಯವಾಗಿ ಇಂದು ಅಧಿಕ e್ಞÁನ ಪಡೆದಿದ್ದೇವೆ. ಪ್ರೋಟೀನ್, ಎನ್ಜೈಮ್, ಹಾರ್ಮೊನ್ ಮೊದಲಾದುವುಗಳ ವಿಷಯವಾದ ತಿಳಿವಳಿಕೆ ಜೀವ ರಸಾಯನಶಾಸ್ತ್ರ ಮತ್ತು ಅಣುಜೀವಶಾಸ್ತ್ರದ ಅಭ್ಯಾಸಗಳ ಮೊದಲ ಹಂತ. ವಿe್ಞÁನದ ಉಳಿದ ಅನೇಕ ವಿಭಾಗಗಳ ಅಭ್ಯಾಸಿಗಳು ಸದಾ ತಮಗೆ ಬೇಕಾದ ಸಲಕರಣೆಗಳಿಗಾಗಿ, ವಿಧಾನಗಳಿಗಾಗಿ ಇಂಗಾಲಸಂಯುಕ್ತಗಳತ್ತ ನೋಡುತ್ತಲೇ ಇರಬೇಕಾಗುತ್ತದೆ. ಜೀವರಸಾಯನಶಾಸ್ತ್ರ ಮತ್ತು ಅಣುಜೀವಶಾಸ್ತ್ರಗಳು ಇಂಗಾಲ ಸಂಯುಕ್ತರಸಾಯನಶಾಸ್ತ್ರದಿಂದಲೇ ಅಂಕುರಗೊಂಡಿರುವ ಹೊಸ ರಸಾಯನಶಾಸ್ತ್ರ ವಿಭಾಗಗಳು.

	ಸಸ್ಯ ಮತ್ತು ಪ್ರಾಣಿಸಂಪತ್ತು : ಕಳೆದ ಮೂವತ್ತೈದು ವರ್ಷಗಳಿಂದ ಪ್ರಪಂಚದ ಪ್ರತಿ ದೇಶದಲ್ಲಿಯೂ ಬೇಸಾಯಗಾರರು ಹಚ್ಚು ಬೆಳೆ ಪಡೆಯಲು ಪ್ರಯುತ್ನಿಸುತ್ತ್ತಿದ್ದಾರೆ. ಈ ಪ್ರಯುತ್ನಗಳಿಗೆ ಪೋಷಕವಾಗಿರುವ ವಸ್ತುಗಳೆಂದರೆ ಕೃತಕ ಗೊಬ್ಬರ ಮತ್ತು ಕೀಟ. ವೈರಸ್ ನಾಶಕಗಳು ಮತ್ತು ಕಳೆನಾಶಕಗಳು. ಕೃತಕ ಗೊಬ್ಬರಗಳು ಬಲುಮಟ್ಟಿಗೆ ಇಂಗಾಲ ಸಂಯುಕ್ತಗಳಲ್ಲ - ನಿರವಯವ ಲವಣಗಳು.

	ಔಷಧ ವಿe್ಞÁನ : ಔಷಧ ರಂಗದಲ್ಲಿ ಉಪಯೋಗಿಸುತ್ತಿರುವ ಅಸಂಖ್ಯಾತ ಸಂಯುಕ್ತಗಳಲ್ಲಿ 90%ಕ್ಕೂ ಮೀರಿದ ಸಂಯುಕ್ತಗಳು ಇಂಗಾಲ ಸಂಯುಕ್ತಗಳು. ಹೊರಗಾಯಕ್ಕೆ ಹಚ್ಚುವ ಮುಲಾವಿನಲ್ಲಿ, ಒಳಹುಣ್ಣಿನ ಉಪಶಮನದಲ್ಲಿ, ಎಲ್ಲ ಬಗೆಯ ದೈಹಿಕ ರೋಗ ಚಿಕಿತ್ಸೆಗಳಲ್ಲಿ ಅನೇಕ ಮಾನಸಿಕ ರೋಗ ಚಿಕಿತ್ಸೆಗಳಲ್ಲಿ ಶಸ್ತ್ರ ಚಿಕಿತ್ಸೆಗಳಲ್ಲಿ (ವೇದನಾಪ್ರತಿಬಂಧಕವಾಗಿ), ರೋಗಕಾರಕ ಸೂಕ್ಷಾಣು ಜೀವಿಗಳ ಎದುರು ಚಿಕಿತ್ಸೆಗಳಲ್ಲಿ ಶರೀರದ ಅಂಗಗಳ ಕಾರ್ಯಗಳನ್ನು ನಿಯಂತ್ರಿಸಲು, ಜನನ ನಿಯಂತ್ರಣಕ್ಕಾಗಿ - ಹೀಗೆ ಕೊನೆಯಿಲ್ಲದಷ್ಟು ಉಪಯೋಗಗಳನ್ನು ಪಡೆದಿರುವ ಔಷಧಗಳು ಬಲು ಪಾಲಿಗೆ ಇಂಗಾಲಸಂಯುಕ್ತಗಳು. ರಾಸಾಯನಿಕ ಚಿಕಿತ್ಸೆ ಇಂದು ನಾವು ಅನೇಕ ರೋಗಗಳನ್ನು ಗೆಲ್ಲಲು ನೆರವು ನೀಡಿದೆ.

	ಕೈಗಾರಿಕೋದ್ಯಮಗಳು : ಯಾವ ಕೈಗಾರಿಕೋದ್ಯಮವೂ ಪ್ರಕೃತಿಯ ಕಚ್ಚಾ ವಸ್ತುಗಳಿಲ್ಲದೆ ಬಲುಕಾಲ ನಡೆಯುವಂತಿಲ್ಲ. ಪ್ರಕೃತಿಯ ಬಲುಪಾಲು ವಸ್ತುಗಳು ಇಂಗಾಲಸಂಯುಕ್ತಪೂರಿತವಾದ್ದರಿಂದ ಇಂಗಾಲಸಂಯುಕ್ತಗಳನ್ನು ಸ್ವಲ್ಪವಾದರೂ ಉಪಯೋಗಿಸದ ಉದ್ಯಮಗಳೇ ಇಲ್ಲವೆನ್ನಬಹುದು. ಇಂದಿನ ದಿವಸಗಳಲ್ಲಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿರುವ ಪ್ಲಾಸ್ಟಿಕ್ಕುಗಳು, ಕೃತಕ ಎಳೆಗಳು, ಚೊಕ್ಕಾರಕಗಳು. ವಿವಿಧ ಕೃತಕ ಮತ್ತು ಸಹಜ ವರ್ಣದ್ರವ್ಯಗಳು, ವಾಹನಗಳಿಗೆ ಉರುವಲಾಗಿ ಉಪಯೋಗಿಸುತ್ತಿರುವ ಪೆಟ್ರೋಲ್, ಸೀಮೆಎಣ್ಣೆ, ಡೀಸೆಲ್ ಎಣ್ಣೆಗಳ ಮೂಲವಾದ ಪೆಟ್ರೋಲಿಯಂ ಮೊದಲಾದುವುಗಳೆಲ್ಲ ಇಂಗಾಲಸಂಯುಕ್ತರಸಾಯನಶಾಸ್ತ್ರದ ಅಂಕೆಗೆ ಒಳಪಟ್ಟಿವೆ.

	ದೇಶಸಂರಕ್ಷಣೆ : ಯುದ್ಧರಂಗದಲ್ಲಿಯೂ ಇಂಗಾಲ ಸಂಯುಕ್ತಗಳ ಉಪಯೋಗ ಬೇಕಾದಷ್ಟಿದೆ. ಪ್ರಸಿದ್ಧ ಸ್ಪೋಟಕಗಳಾದ ಟಿ.ಎನ್.ಟಿ., ನೈಟ್ರೊಗ್ಲಿಸರಿನ್ ಮೊದಲಾದವುಗಳು ಇಂಗಾಲಸಂಯುಕ್ತಗಳು. ನೈಟ್ರೋಸಂಯುಕ್ತಗಳಿಂದ ಕೂಡಿದ ರಾಕೆಟ್ ಇಂಧನಗಳು, ರಾಕೆಟ್ ಇಂಧನದ ಆವರಣಗಳಿಗಾಗಿ ಉಪಯೋಗಿಸುವ ವಿಶಿಷ್ಟ ದರ್ಜೆಯ ಪ್ಲಾಸ್ಟಿಕ್ಕುಗಳೇ ಮೊದಲಾದುವು ಈ ರಂಗದಲ್ಲಿ ಇಂಗಾಲ ಸಂಯುಕ್ತಗಳ ಮುಖ್ಯ ಉಪಯೋಗಗಳನ್ನು ಪ್ರತಿನಿಧಿಸುತ್ತವೆ. ವಿಪರೀತ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನುಂಟುಮಾಡುವ ಅಶ್ರುವಾಯುವಿನಂಥ (ಟಿಯರ್ ಗ್ಯಾಸ್) ಮತ್ತು ಅದಕ್ಕೂ ಹೆಚ್ಚು ಹಾನಿಕರವಾದ ಅನೇಕ ಇಂಗಾಲಸಂಯುಕ್ತಗಳನ್ನು ಯುದ್ದಗಳಲ್ಲಿ ಉಪಯೋಗಿಸಲಾಗುತ್ತದೆ.

	ಪ್ರತಿರಂಗದಲ್ಲಿಯೂ ಎಲ್ಲೆಲ್ಲೂ ಉಪಯೋಗಿಸಲಾಗುತ್ತ್ತಿರುವ ಸರ್ವವ್ಯಾಪಿ ಇಂಗಾಲಸಂಯುಕ್ತಗಳ ಉಪಯೋಗಗಳೆಲ್ಲವನ್ನೂ ಇಲ್ಲಿ ಹೇಳಲು ಸಾಧ್ಯವಿಲ್ಲ. ಜೀವನದ ಪ್ರತಿರಂಗ, ಪ್ರತಿ ಹಜ್ಜೆಗಳಲ್ಲೂ ಹಾಸುಹೊಕ್ಕಾಗಿ ಇಂಗಾಲಸಂಯುಕ್ತಗಳು ಇವೆ. ಆದ್ದರಿಂದ ಇಂಗಾಲಸಂಯುಕ್ತರಸಾಯನಶಾಸ್ತ್ರದಲ್ಲಿನ ಹಲವು ಇತ್ತೀಚಿನ ಮುನ್ನಡೆಗಳು ಜನಜೀವನದ ಮೇಲೆ ಬೀರುವ ಅಪಾರ ಪರಿಣಾಮಗಳನ್ನು ಇಲ್ಲಿ ವಿವರಿಸಿದೆ. 		
(ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ